ದಾಂಡೇಲಿ :ದಾಂಡೇಲಿ ನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಾಂಜಾ ಮಾರಾಟ ಪ್ರಕರಣದ ಬಗ್ಗೆ ಪತ್ತೆಗಾಗಿ ದಾಂಡೇಲಿ ಉಪವಿಭಾಗದ ಡಿವೈಎಸ್ಪಿ ಶಿವಾನಂದ ಮದರಕಂಡಿ ಸಿ.ಪಿ.ಐ ಜಯಪಾಲ ಪಾಟೀಲ್ ಹಳಿಯಾಳ ವೃತ್ತ (ಪ್ರಭಾರ ದಾಂಡೇಲಿ ವೃತ್ತ) ರವರ ಮಾರ್ಗದರ್ಶನದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಮೀನಸಾಬ ಆತ್ತಾರ ಪಿಎಸ್.ಐ (ಕಾ.ಸು) ಹಾಗೂ ಅಧಿಕಾರಿ ಸಿಬ್ಬಂಧಿಯವರನ್ನೊಳಕೊಂಡ ತಂಡವನ್ನು ರಚಿಸಿದ್ದು, ಖಚಿತ ಮಾಹಿತಿಯ ಮೇರೆಗೆ ದಾಂಡೇಲಿಯ ನಗರ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಈರಣ್ಣಾ ವಗ್ಗೋಡಗಿ,ಸುನೀಲ್ ಲುಗಾಡೆ,ಮೆಹಬೂಬ ಕಿಲ್ಲೆದಾರ, ಪ್ರಸನ್ನಕುಮಾರ, ಚಂದ್ರಶೇಖರ ಪಾಟೀಲ್, ಕೃಷ್ಣ,ಶಿವಾನಂದ, ಇಮ್ರಾನ ಕಂಬಾರಗಣವಿ ರವರು ಸೇರಿಕೊಂಡು ದಾಂಡೇಲಿಯ ಅಂಬೇವಾಡಿಯ ರೇಲ್ವೇ ಸ್ಟೇಷನ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ನಗರದ ಬೈಲಪಾರ ನಿವಾಸಿ ಫೈರೋಜ ಯಾಸಿನ್ ಯರಗಟ್ಟಿ ( 22) ಗಾಂಜಾ ಮಾರಾಟ ಮಾಡುತ್ತಿರುವಾಗ ಇತನನ್ನು ಬಂಧಿಸಿದ್ದಾರೆ.ಇತನ ಬಳಿ ಇದ್ದ ಒಟ್ಟೂ ಸುಮಾರು 40,000/- ರೂಪಾಯಿ ಬೆಲೆಬಾಳುವ 536 ಗ್ರಾಂ ತೂಕದ ಗಾಂಜಾ ಪದಾರ್ಥ
,ನೀಲಿ ಬಣ್ಣದ ಕೈ ಚೀಲ್ ,೧೦೦ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಪಿ.ಎಸ್.ಐ ಕಿರಣ ಪಾಟೀಲ ಅವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಪೋಲಿಸರ ಇ ಕಾರ್ಯಕ್ಕೆ ಪೊಲೀಸ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.