
ಕಾರವಾರ:
ತಾಲೂಕಿನ ಅಮದಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಉತ್ತರ ಭಾರತ ಮೂಲದ ಪ್ರವಾಸಿಗರ ಬೈಕ್ಗೆ ಆಕಸ್ಮಿಕ ಬೆಂಕಿ ತಗುಲಿ ಬೈಕ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ.
ಉತ್ತರ ಪ್ರದೇಶ ಮೂಲದ ಶಾವೇಶ್ ಎಂಬುವವರಿಗೆ ಸೇರಿದ ಜಾವಾ ಬೈಕ್ ಇದಾಗಿದೆ. ಇವರು ಸ್ನೇಹತರೆಲ್ಲರೂ ಸೇರಿ ಉತ್ತರ ಪ್ರದೇಶದಿಂದ ಬೈಕ್ ಮೂಲಕ ಪ್ರವಾಸಕೈಗೊಂಡಿದ್ದರು.. ನಿನ್ನೆ ರಾತ್ರಿ ಮುರುಡೇಶ್ವರದಲ್ಲಿ ವಾಸ್ತವ್ಯ ಮಾಡಿದ್ದ ಇವರು ಇಂದು ಬೆಳಿಗ್ಗೆ ಮುರುಡೇಶ್ವರದಿಂದ ಗೋವಾ ಪ್ರಯಾಣಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೈಕ್ಗೆ ಬೆಂಕಿ ಹತ್ತಿಕೊಂಡಿದೆ.
ತಕ್ಷಣ ಇವರ ಹಿಂಬದಿಯಲ್ಲಿ ಬರುತ್ತಿದ್ದ ಇನ್ನೋರ್ವ ಸ್ನೇಹತರು ಬೈಕ್ಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿದ್ದಯ, ಬೈಕ್ನಲ್ಲಿದ್ದ ಶಾವೇಶ್ ಬೈಕ್ ಮೇಲಿನಿಂದ ಹಾರಿಕೊಂಡಿದ್ದಾರೆ. ಸದ್ಯ ಇವರು ಪ್ರಾಣಾಪಾಯದಿಂದ ಪಾರಾಗಿದ್ದು,ಆದರೆ ಇವರು ಚಲಿಸುತ್ತಿದ್ದ ಬೈಕ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಘಟನಾ ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ