
ದಾಂಡೇಲಿ:
ನಗರದ ಅಂಬೇವಾಡಿಯ ಇಂಡಿಯನ ಗ್ಯಾಸ ಕಚೇರಿಗೆ ಹೋಗುವ ರಸ್ತೆಯ ಕ್ರಾಸನಲ್ಲಿ ವಿದ್ಯುತ ಕಂಬಕ್ಕೆ ತಿರಾ ಕೆಳಮಟ್ಟದಲ್ಲಿ ತೆರೆದ ಎಲೆಕ್ಟ್ರೀಕಲ್ ಸ್ವಿಚ್ ಬೋರ್ಡನ್ನು ಕಟ್ಟಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ನಗರವಾಸಿಗಳು,ಚಿಕ್ಕ ಮಕ್ಕಳು ಭಯದ ನೆರಳಿನಲ್ಲಿಯೇ ಸಂಚರಿಸುವಂತಾಗಿದೆ.
ಅಂಬೇವಾಡಿಯ ಇಂಡಿಯನ ಗ್ಯಾಸ ಕಚೇರಿಗೆ ಹೋಗುವ ರಸ್ತೆಯ ಆರಂಭದಲ್ಲಿಯೇ ಮನೆ ಕಾಮಗಾರಿ ನಡೆಯುತ್ತಿದ್ದು ನೇರವಾಗಿ ವಿದ್ಯುತ್ ಕಂಬದಿಂದ ಸಂಪರ್ಕ ಪಡೆದ ಸ್ವಿಚ್ ಬೋರ್ಡ ವಿದ್ಯುತ ಕಂಬದ ತಿರಾ ಕೇಳ ಭಾಗದಲ್ಲಿ ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ದಿನ ನಿತ್ಯಲು ಮಕ್ಕಳು,ಹಿರಿಯರು ಸಂಚರಿಸುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ನಿಶ್ಚಿತ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಇ ಎಲೆಕ್ಟ್ರೀಕಲ್ ಸ್ವಿಚ್ ಬೋರ್ಡನ್ನು ಅಳವಡಿಸಿದವರ ಮೇಲೆ ಕ್ರಮ ಕೈಗೊಂಡು ಅಪಾಯ ಸಂಭವಿಸುವ ಮುನ್ನವೆ ಬೊರ್ಡನ್ನು ಸುರಕ್ಷಿತ ಅಂತರಕ್ಕೆ ಎರಿಸಬೇಕೆಂದು ಸ್ಥಳಿಯರ ಮನವಿಯಾಗಿದೆ.