ದಾಂಡೇಲಿ : ಚಾಕಲೇಟ್ ಕೊಡುತ್ತೇನೆಂದು ಆಮೀಷವೊಡ್ಡಿ ಮನೆಯ ಒಳಗಡೆ ಬಾಲಕಿಯನ್ನು ಕರೆದು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ.
ದಾಂಡೇಲಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ತಾಲೂಕಿನ ಗ್ರಾಮೀಣ ಭಾಗದ ನಿವಾಸಿ ಗೌಸ್ ಖಾನ್ ಮಹಮ್ಮದ್ ಖಾನ್ ಪಠಾಣ್ (ವ.50) ಎಂಬಾತನನ್ನು ಬಂಧಿಸಿ, ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.