ದಾಂಡೇಲಿ : ನಗರದ 11 ಕೆವಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮತ್ಕೆಲವೆಡೆ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಅವರು ಬುಧವಾರ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ಮಾರ್ಚ ೬ ರಂದು ನಗರದ ಬೈಲಪಾರ್, ಫಟರೆಸ್ಟ ಐಬಿ, ಹಳೆ ದಾಂಡೇಲಿಅಂಬೇವಾಡಿ, ನಿರ್ಮಲ ನಗರ, ಮಿರಾಶಿ ಗಲ್ಲಿ,ಕುಳಗಿ ರಸ್ತೆ,ಕೋಗಿಲ ಬಾನ್,ಲಮಾಣಿ ಚಾಲ್,ಜನತಾ ಕಾಲನಿ, ಪಟೇಲ್ ವೃತ್ತ, ಮತ್ತು ಜೆ.ಎನ್.ರಸ್ತೆ ಪ್ರದೇಶ ವ್ಯಾಪ್ತಿಯಲ್ಲಿ ಹಾಗೂ ಮಾರ್ಚ ೮ ರಂದು ನಗರದ ಬಸವೇಶ್ವರ ನಗರ ಹಾಗೂ ಅಂಬೇವಾಡಿಯಲ್ಲಿ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 6:00 ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಎಂದಿನಂತೆ ಸಾರ್ವಜನಿಕರು ಸಹಕರಿಸುವಂತೆ ದೀಪಕ್ ನಾಯಕ ಅವರು ವಿನಂತಿಸಿದ್ದಾರೆ.