ಭಟ್ಕಳ:
ಕರ್ತವ್ಯ ಮುಗಿದ ಬಳಿಕ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬೈಕಿನಿಂದನಿಯಂತ್ರಣ ತಪ್ಪಿ ಬಿದ್ದು ರೈಲ್ವೆ ಸಿಬ್ಬಂದಿಯೋರ್ವ ಸಾವನ್ನಪ್ಪಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ಸಂಜಯಕುಮಾರ ಗಣಪಯ್ಯ ಶೇರುಗಾರ (52) ಮೃತ ದುರ್ದೈವಿ. ಇವರು ಕೊಂಕಣ ರೈಲ್ವೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಉದ್ಯೋಗ ಮಾಡುತ್ತಿದ್ದರು. ರಾತ್ರಿ ಡ್ಯೂಟಿ ಮುಗಿಸಿ ಭಟ್ಕಳದಿಂದ ಬೈಕ್ ಮೇಲೆ ತೆರಳುವ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಗಟಾರಲ್ಲಿ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.