
ದಾಂಡೇಲಿ-
ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಕರಿಸಲಾಯಿತು. ಮಹಿಳೆಯರು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ವಿರೋಧಿಸಿ ಮಹಿಳಾ ಜಾಗೃತಿಯ ಕಾರ್ಯಕ್ರಮ ನಡೆಸಲಾಯಿತು. ಉಮೆನ್ ಇನ್ ಬ್ಲಾಕ್ ಹೋರಾಟದ ನೆನಪು ಮತ್ತು ಸಮಸ್ತ ಮಹಿಳಾ ಹಕ್ಕೊತ್ತಾಯಗಳನ್ನು ಮಂಡಿಸಲು ಕಪ್ಪು ಉಡಿಗೆಯಲ್ಲಿ ಮೆಣಬತ್ತಿಗಳನ್ನು ಬೆಳಗಿಸಿ ಮೌನವನ್ನು ಆಚರಿಸಲಾಯಿತು. ಸುಮಾರು ಮೂವತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಹಿಳಾ ಅರಿವಿನ ಸಂದೇಶಗಳನ್ನು ಸಾರಿದರು. ಮಹಿಳಾಪರವಾದ ಹಾಡುಗಳನ್ನು ಹಾಡಿದರು. ಎರಡನೇ ಹಂತದಲ್ಲಿ ” “ಮಹಿಳಾ ಪರವಾದ ಗ್ಯಾರೆಂಟಿ ಯೋಜನೆಗಳಿಂದ ಮಹಿಳೆಯರ ಹಿತ ಸಾಧ್ಯವಾಗಿದೆಯೇ ” ಎಂಬ ವಿಷಯದಲ್ಲಿ ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು. 25 ವಿದ್ಯಾರ್ಥಿ ವಿದ್ಯರ್ಥಿನಿಯರು ಮಾತನಾಡಿದರು. ಇವರಲ್ಲಿ ಚಂದ್ರಿಕಾ ಎಸ್. ಮಹಾಲಕ್ಷ್ಮಿ ಪಾವನೆ ಪ್ರಥಮ, ಯಶೋಧಾ, ನಾಗರತ್ನಾ ದ್ವಿತೀಯ, ಸಂಗೀತಾ ಬೇಡಕೆ, ಗಂಗಾಧರ್ ತೃತೀಯ ಹಾಗೂ ಭಾವನಾ ಸಮಾಧಾನಕರ ಬಹುಮಾನ ಪಡೆದರು. ಡಾ. ವಿನಯಾ ಜಿ. ನಾಯಕ, ನಿಷತ್ ಶರೀಫ್,, ಡಾ ಚಂದ್ರಶೇಖರ ಲಮಾಣಿ ಹಾಗೂ ಬಸವರಾಜ ಹೂಲಿಕಟ್ಟಿ ನಿರ್ಣಾಯಕರಾಗಿದ್ದರು. ಮಹಾವಿದ್ಯಾಲದ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಎಂ ಡಿ ಒಕ್ಕುದ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಾಕಿ ಡಾ ವಿನಯಾ ನಾಯಕ ಆರಂಭದಲ್ಲಿ ಸ್ವಾಗತಿಸಿ ಯಶಸ್ವಿಗೊಳಿಸಿದ ಎಲ್ಲರಿಗೂ ಕೊನೆಯಲ್ಲಿ ಅಭಿನಂದಿಸಿದರು ಉಷಾ ನಾಯಕ ಚರ್ಚಾ ಸ್ಪರ್ಧೆಯನ್ನು ನಿರೂಪಿಸಿದರು.