
ಕಾರವಾರ:
ಜಿಲ್ಲಾ ಪೊಲೀಸ್ ಇಲಾಖೆಯಿಂದ ನಡೆಯುತ್ತಿದ್ದ ಮ್ಯಾರಾಥಾನ್ ನಲ್ಲಿ ಓಡುತ್ತಿದ್ದ ಸ್ಪರ್ಧಿಯು ಕುಸಿದು ಬಿದ್ದಿದ್ದು ಶಾಸಕ ಸತೀಶ ಸೈಲ್ ನೆರವಿಗೆ ಧಾವಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನಗರದಲ್ಲಿ ಮಾದಕ ವಸ್ತು ನಿಯಂತ್ರಣ ಜಾಗೃತಿಗಾಗಿ ನಡೆಯುತ್ತಿದ್ದ ಮ್ಯಾರಾಥಾನ್ ಆಯೋಜಿಸಲಾಗಿತ್ತು.ಈ ವೇಳೆ ಕುಸಿದು ಬಿದ್ದ ನೌಕಾದಳ ಉದ್ಯೋಗಿ ಗುರುಚರಣ್ ಇಲ್ಲಿನ ಮಾಲಾದೇವಿ ಮೈದಾನದ ಬಳಿ ಕುಸಿದು ಬಿದ್ದಿದ್ದಾನೆ. ತಕ್ಷಣ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ಶಾಸಕ ಸತೀಶ ಸೈಲ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರನ್ನ ಕರೆಸಿ ಚಿಕಿತ್ಸೆಗೆ ಸಹಕರಿಸಿದ್ದಾರೆ.
ಚಿಕಿತ್ಸೆ ನಂತರ ಸ್ಪರ್ಧಿಯು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.