
ಮುಂಡಗೋಡ:
ತಾಲೂಕಿನ ಕಾತೂರ್ ಮೂಡಸಾಲಿ ಗ್ರಾಮದ ವ್ಯಕ್ತಿ ಮಂಜುನಾಥ ಜಾದವ ರಸ್ತೆಯ ಬದಿಯಲ್ಲಿ ಮೃತರಾಗಿ ಕಂಡುಬಂದಿದ್ದು ಕೊಲೆಯಾಗಿರುವ ಶಂಖೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ.
ಮುಂಡಗೋಡ ತಾಲೂಕಿನ ಬಂಕಾಪುರದ ಒಳ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಘಟನೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಮೃತ ವ್ಯಕ್ತಿಯ ಮೇಲೆ ಬೈಕ್ ಬಿದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸ್ ತನಿಖೆಯ ಬಳಿಕವೇ ನಿಜಾಂಶ ತಿಳಿಯಬೇಕಿದೆ.