
ಶಿರಸಿ:
ಶಿರಸಿ ತಾಲೂಕಿನಾದ್ಯಂತ ನೈಜ್ ಚಿರತೆ ಪ್ರತ್ಯಕ್ಷವಾಗುತ್ತಿರುವುದು ಸಿಸಿ ಕ್ಯಾಮರಗಳಿಂದ ಕಂಡು ಬರತೊಡಗಿದೆ. ಸೊಕಮವಾರ ರಾತ್ರಿ ಸುಮಾರು 8 ಗಂಟಗೆ ಆರೆಕೊಪ್ಪ ಮತ್ತು ಬಚಗಾಂವ್ ಗ್ರಾಮದ ಮದ್ಯ ಭಾಗದಲ್ಲಿರುವ ವಿನಾಯಕ ನಾಯ್ಕ ಇವರ ಮನೆ ಹೊರಗಿನ ಗೇಟಿನ ವರೆಗೆ ಚಿರತೆ ಬಂದಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಚಿರತೆ ಕಾಣಿಸಿಕೊಂಡಿರುವುದು ಆ ಭಾಗದ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ರಸ್ತೆಯಿಂದಲೇ ಮಕ್ಕಳು ಶಾಲೆಗಳಿಗೆ ಹೋಗಿ ಬರುವುದರಿಂದ ಸಹಜವಾಗಿಯೇ ಪಾಲಕರಲ್ಲಿ ಭಯ ಹುಟ್ಟಿಸುವಂತೆಮಾಡಿದೆ.