
ಅಂಕೋಲಾ:
ಕೇಣಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಮೀನುಗಾರರ ಪ್ರತಿಭಟನೆ ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಜೆಎಸ್ಡಬ್ಲೂ ಕಂಪೆನಿಯಿಂದ ನಿರ್ಮಾಣವಾಗಲಿರುವ ವಾಣಿಜ್ಯ ಬಂದರು ವಿರೋಧಿಸಿ ಮೀನುಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕೇಣಿಯಲ್ಲಿ ನಿಷೇದಾಜ್ಞೆ ಇರುವ ಕಾರಣ ಸಮಿದ್ರದಲ್ಲಿ ಸರ್ವೇ ನಡೆಸುತ್ತಿರುವ ಸ್ಥಳದಲ್ಲಿ ಮೀನುಗಾರರ ಪ್ರತಿಭಟನೆಗೆ ಅವಕಾಶವಿರಲಿಲ್ಲ. ಹೀಗಾಗಿ ಬೇಲೆಕೇರಿಯ ಬಂದರು ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಬೇಲೆಕೇರಿ ಬಂದರಿನಿಂದಲೇ ಬೋಟ್ ಮುಇಲಕ ತೆರಳಿದ ಮೀನುಗಾರರು ಸಮುದ್ರದಲ್ಲಿ ನೂರಾರು ಬೋಟುಗಳನ್ನು ನಿಲ್ಲಿಸಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದರು.