
ಹಳಿಯಾಳ –
ನಗರದ ದಾಂಡೇಲಿ ರಸ್ತೆಯ ಬದಿಯಲ್ಲಿ ಮಂಗಳವಾರ ತಡರಾತ್ರಿ ಮೂರು ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ವಿಡಿಯೋ ವೈರಲ್ ಆಗಿದೆ.
ತಾಯಿ ಚಿರತೆಗಾಗಿ ಕಾಯುತ್ತಿರುವ ರೀತಿಯಲ್ಲಿ ಮರಿಗಳು ಕಂಡುಬಂದಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ವಿಡಿಯೋ ಚಿತ್ರೀಕರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸುತ್ತಮುತ್ತಲಿನ ಸಾರ್ವಜನಿಕರಿಗೆ ಆತಂಕ ಹೆಚ್ಚಾಗಿದೆ.