ಶಿರಸಿ:
ತಾಲೂಕಿನ ಹುತ್ಗಾರನಲ್ಲಿ ಸ್ವಂತ ಅಣ್ಣನನ್ನೇ ತಮ್ಮನು ಸುತ್ತಗೆಯಿಂದ ಹೊಡೆದು ಕೊಲೆ ಮಾಡಿದ ಬೆಚ್ಚಿ ಬಿಳಿಸುವ ಘಟನೆ ನಡೆದಿದೆ.
ತ್ಯಾಗರಾಜ ಗಣಪತಿ ಮುಕ್ರಿ (30) ಕೊಲೆಯಾದ ವ್ಯಕ್ತಿ. ಆತನ ತಮ್ಮ ಶಿವರಾಜ ಗಣಪತಿ ಮುಕ್ರಿ ಕೊಲೆಮಾಡಿದ ಆರೋಪಿಯಾಗಿದ್ದಾನೆ. ಕ್ಷುಲ್ಲಕಕಾರಣಕ್ಕಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ಮುಂದಿವರೆದು ತಮ್ಮ ಶಿವರಾಜ ಸುತ್ತಿಗೆಯಿಂದ ಹಲ್ಲೆಗೆ ಮುಂದಾಗಿದ್ದಾನೆ. ತಪ್ಪಿಸಲು ಬಂದ ಹೇಮಾವತಿ ತ್ಯಾಗರಾಜ ಮುಕ್ರಿ ಹಾಗು ರೋಹಿತ ಮಂಜುನಾಥ ಮುಕ್ರಿ ಮೇಲೂ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರಕಾರಿ ಆಸ್ಪತ್ರೆಯಲ್ಲಿ ತ್ಯಾಗರಾಜ ಮೃತಪಟ್ಟಿದ್ದಾನೆ.
ಘಟನೆ ಬೆಳಕೊಗೆ ಬರುತ್ತಿದ್ದಂತೆ ಸಿಪಿಆಯ್ ಸೀತಾರಾಮ ನೇತ್ರತ್ವದಲ್ಲಿ ತನಿಖೆ ಆರಂಭಿಸಿದ್ದಾರೆ.