
ಹೊನ್ನಾವರ :
ಐದನೇ ತರಗತಿ ವಿದ್ಯಾರ್ಥಿ ಓರ್ವನಿಗೆ ಶಿಕ್ಷಕಿಯು ಮನಬಂದಂತೆ ಥಳಿಸಿ ಮೈ ಮೇಲೆ ಬಾಸುಂಡೆ ತರಿಸಿರುವ ಘಟನೆ ಹೊನ್ನಾವರದ ಹಳ್ಳಿಕಾರ್ ಕರ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವು ಬೆಳಕಿಗೆ ಬಂದಿದೆ.
ಐದನೆ ತರಗತಿ ಓದುತ್ತಿದ್ದ ವಿದ್ಯಾರ್ಥಿ ಓರ್ವ ಗಣಿತವನ್ನ ಸರಿಯಾಗಿ ಮಾಡಿಲ್ಲವೆಂದು ಸಿಟ್ಟಾದ ಶಿಕ್ಷಕಿ ವಿದ್ಯಾರ್ಥಿಗೆ ಕೊಲಿನಿಂದ ಹೊಡೆದಿದ್ದಾರೆ. ಇದರಿಂದಾಗಿ ಆ ವಿದ್ಯಾರ್ಥಿಯ ಬೆನ್ನು ಬಾಸುಂಡೆಯಿಂದ ತುಂಬಿಕೊಂಡಿದೆ.
ಶಾಲೆಯಿಂದ ಮನೆಗೆ ಹೋದ ವಿದ್ಯಾರ್ಥಿ ನೋವು ತಡೆದುಕೊಳ್ಳಲಾಗದೆ. ಪಾಲಕರಿಗೆ ವಿಚಾರ ತಿಳಿಸಿದ್ದಾನೆ. ಬಳಿಕ ಪಾಲಕರು ಶಿಕ್ಷಕಿಯನ್ನ ಕೇಳಿದ್ದರೆ ಆತನಿಗೆ ಅಲರ್ಜಿಯಿಂದಾಗಿ ಮೈ ಕೆಂಪಾಗಿರಬೇಕು ಎಂದು ತಪ್ಪಿಸಿಕೊಳ್ಳುವ ಹೇಳಿಕೆ ನೀಡಿದ್ದಾರೆ. ಘಟನೆಯ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಬೇಕು ಎಮದು ಪಾಲಕರು ಒತ್ತಾಯಿಸಿದ್ದಾರೆ.