
ಶಿರಸಿ:
ಗುರುವಾರ ತಡರಾತ್ರಿ ಇಲ್ಲಿನ ಇಸಳೂರಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕಿಳಿದ ಪಲ್ಟಿಯಾದ ಘಟನೆ ನಡೆದಿದೆ.
ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದರೆಂದು ಹೇಳಲಾಗಿದ್ದು, ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಯಾಣಿಕರು ಶಿರಸಿಯವರಾಗಿದ್ದು ಕಾರು ಹೊಸಪೇಟೆ ಯಿಂದ ಶಿರಸಿಗೆ ಬರುತಿತ್ತು, ಇಸಳೂರ್ ಸಮೀಪದ ಹುಲದೇವನಸರ ಕತ್ರಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.