
ಕಾರವಾರ:
ಕಾರವಾರದ ಸೀಬರ್ಡ್ ನಿರಾಶ್ರಿತರಿಗೆ 2008-09 ರಿಂದ ಬಾಕಿ ಉಳಿದಿದ್ದ 28/ಎ ಪ್ರಕರಣದ 10.47 ಕೋಟಿ ರೂಗಳ ಪರಿಹಾರ ಮಂಜೂರಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಮದಳ್ಳಿ, ಕೊಡರ, ಹಟ್ಟಿಕೇರಿ, ಬಿಣಗ, ಚೆಂಡಿಯಾ, ಬಿರಾಡೆ ಈ ಗ್ರಾಮಗಳ ಕೆಲವು ನಿರಾಶ್ರಿತರ ಪ್ರಕರಣಗಳು ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದವು. ಸಮಸ್ಯೆಗಳನ್ನು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರ ಗಮನಕ್ಕೆ ತರಲಾಗಿದೆ. ಇದೀಗ 57 ಪ್ರಕರಣಗಳಿಗೆ ಪರಿಹಾರ ದೊರಕಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಆದೇಶದಿಂದ ಸದ್ಯ 10.47 ಕೋಟಿ ರೂ. ಪರಿಹಾರ ನಿಧಿಯ ಮಂಜೂರಾಗಿದ್ದು ಕೆಲವೇ ದಿನಗಳಲ್ಲಿ 57 ಪ್ರಕರಣಗಳಿಗೆ ಪರಿಹಾರ ಮೊತ್ತವು ಖಾತೆಗಳಿಗೆ ಜಮಾ ಆಗಲಿದೆ. ಉಳಿದ ಪ್ರಕರಣಗಳಲ್ಲಿ ಹಂತ ಹಂತವಾಗಿ ಪರಿಹಾರವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.