
ಶಿರಸಿ:
ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರ ಉಚ್ಚಾಟನೆಯ ವಿಷಯ ಕೇಂದ್ರದ ನಾಯಕರ ನಿರ್ಧಾರವಾಗಿದ್ದು ಈ ಬಗ್ಗೆ ಮಾತನಾಡುವುದಿಲ್ಲ. ಈಗಾಗಲೇ ನೋಟಿಸ್ ಕೊಟ್ಟವರಿಗೂ ಕೂಡಾ ಕೇಂದ್ರದ ಹೈಕಮಾಂಡ್ ಸೂಕ್ತವಾದ ನಿರ್ಧಾರ ಕೈಗೊಳ್ಳಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ.
ಶಿರಸಿಯಲ್ಲಿ ಮಾತಮಾಡಿದ ಅವರು. ಉಚ್ಚಾಟನೆಯು ಹೈಕಮಾಂಡ್ ನಿರ್ಧಾರ. ಈ ಬಗ್ಗೆ ಚರ್ಚಿಸುವುದಿಲ್ಲ. ಈಗಾಗಲೇ ನೋಟೀಸ್ ನೀಡಿದವರ ಬಘಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಶಿರಸಿ ಕೇಂದ್ರ ಬಸ್ ನಿಲ್ದಾಣ, ಟ್ರಾಪಿಕ್ ಪೋಲಿಸ್ ಠಾಣೆ, ರಸ್ತೆ, ಆರ್, ಟಿ ಓ ಕಚೇರಿ, ಆಸ್ಪತ್ರೆ, ಆಡಳಿತ ಸೌಧ, ಒಳ ಕ್ರೀಡಾಂಗಣ ಎಲ್ಲವೂ ಬಿಜೆಪಿ ಆಡಳಿತದಲ್ಲಾದ ಕೆಲಸಗಳು. ಇದೀಗ ಅನುಷ್ಠಾನವಾಗುತ್ತಿವೆ. ನಾವು ಮಾಡಿದ ಕೆಲಸ ಬಿಟ್ಟು ಜನರಿಗಾಗಿ ಶಾಸಕರು ಯಾವುದಾದರೂ ಹೊಸ ಅಭಿವೃದ್ಧಿ ಕೆಲಸ ತರುವಂತಾಗಲಿ ಎಂದರು.