
ಶಿರಸಿ:
ಕದಂಬೋತ್ಸವದ ಕಾರ್ಯಕ್ರಮಕ್ಕೂ ಮುನ್ನ ವಿದ್ಯುತ್ ಗ್ರೀಡ್ ಉದ್ಘಾಟಿಸದಿದ್ದರೆ ಕದಂಬೋತ್ಸವವನ್ನು ಕರಾಳ ಉತ್ಸವ ಎಂದು ಘೋಷಿಸುತ್ತೇವೆ ಎಂದು ರೈತರು ಕಿಡಿಕಾರಿದ್ದಾರೆ.
ಬನವಾಸಿಯಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಬುಧವಾರ ಬನವಾಸಿ ಬಂದ್ ಗೆ ಕರೆ ನೀಡಲಾಗಿತ್ತು. ಈ ಹಿನ್ನಲೆ ನೂರಾರು ರೈತರು ಬನವಾಸಿಯಲ್ಲಿ ಹಸಿರು ಶಾಲು ಹಿಡಿದು ಪ್ರತಿಭಟನಾ ಮೆರವಣಿಗೆ ಮಾಡಿದರು. ಅಂಗಡಿ ಮುಂಗಟ್ಟುಗಳನ್ನು ಕೂಡ ಬಂದ್ ಮಾಡಿದ ಮಾಲೀಕರು ಬಂದ್ ಗೆ ಬೆಂಬಲ ನೀಡಿದ್ದರು.
ಬನವಾಸಿಯ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಸರಬರಾಜು ಕೇಂದ್ರದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಿ ಸರಬರಾಜು ಕೇಂದ್ರದ ಅತಿ ಶೀಘ್ರವಾಗಿ ಉದ್ಘಾಟನೆ ಮಾಡಬೇಕು. ವಿದ್ಯುತ್ ಲೈನ್ ತರಲು ಆಕ್ಷೇಪ ಮಾಡುವ ಅರಣ್ಯ ಇಲಾಖೆಗೆ ವಿದ್ಯುತ್ ಕಡಿತ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ವಿದ್ಯುತ್ ಗ್ರಿಡ್ ಉದ್ಘಾಟನೆಗು ಮುನ್ನ ಕದಂಬೋತ್ಸವ ಮಾಡಿದರೆ ಅದನ್ನು ವಿರೋಧಿಸಿ ಕರಾಳ ಇತ್ಸವ ಎಂದು ಘೋಷಣೆ ಮಾಡುತ್ತೇವೆ ಎಂದು ಕಿಡಿಕಾರಿದರು.