
ಹಳಿಯಾಳ : ಇಂದು ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನದ ಅಂಗವಾಗಿ ಭಾಜಪಾ ಹಳಿಯಾಳ ಮಂಡಲ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಾಲಯದ ಮೇಲೆ ಪಕ್ಷದ ಬಾವುಟವನ್ನು ಹಾರಿಸಿ, ಸಿಹಿ ಹಂಚಿ ಸಭೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸುನೀಲ್ ಹೆಗಡೆ, ಮಾಜಿ ವಿ.ಪ ಸದಸ್ಯರಾದ ಶ್ರೀ ಶ್ರೀಕಾಂತ ಘೋಟ್ನೇಕರ ಹಾಗೂ ಹಿರಿಯರಾದ ಶ್ರೀ ಮಂಗೇಶ ದೇಶಪಾಂಡೆ ಅವರು ಪಾಲ್ಗೊಂಡರು.
ಮಾಜಿ ಶಾಸಕ ಸುನೀಲ್ ಹೆಗಡೆ ಅವರು ಮಾತನಾಡಿ ಬಿಜೆಪಿ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷ ಮಾತ್ರವಲ್ಲ. ಸಂಘದ ಗರಡಿಯಲ್ಲಿ ದೇಶಪ್ರೇಮದ ಶಿಕ್ಷಣ ಪಡೆದು ರಾಷ್ಟ್ರ ಮೊದಲು ಎಂಬ ಸಂಕಲ್ಪದೊಂದಿಗೆ ದೇಶಕ್ಕಾಗಿ ಮಿಡಿಯ ಒಂದು ಶ್ರೇಷ್ಠ ಸಂಘಟನೆಯಾಗಿದೆ. ನನ್ನಂತಹ ಸಾಮಾನ್ಯ ವ್ಯಕ್ತಿಗೂ ಅಗ್ರಸ್ಥಾನ ಕರುಣಿಸಿದ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ ಎಂದು ತಿಳಿಸಿದರು.
ಮಾಜಿ ವಿ.ಪ ಸದಸ್ಯ ಶ್ರೀಕಾಂತ ಘೋಟ್ನೇಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪಕ್ಷದ ಕಾರ್ಯಕರ್ತರಿಗೆ ಸ್ಥಾಪನಾ ದಿನದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ, ಪಕ್ಷದ ಅಧ್ಯಕ್ಷರಾದ ವಿಠ್ಠಲ ಸಿದ್ಧನ್ನವರ, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಘಟಕಾಂಬಳೆ, ನಗರ ಘಟಕ ಅಧ್ಯಕ್ಷರಾದ ತಾನಾಜಿ ಪಟ್ಟೇಕರ, ಜಿಲ್ಲಾ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತ ಚಿನಗಿನಕೊಪ್ಪ, ಪುರಸಭೆ ಸದಸ್ಯರಾದ ಚಂದ್ರಕಾಂತ ಕಮ್ಮಾರ, ಶಾಂತಾ ಹಿರೇಕರ, ರೂಪಾ ಗಿರಿ, ಮೋರ್ಚಾ ಅಧ್ಯಕ್ಷರಾದ ಯಲ್ಲಪ್ಪ ಹೆಳವರ, ಸಂಗೀತಾ ಜಾವಳೇಕರ, ಪ್ರಮುಖರಾದ ಪಾಂಡು ಪಾಟೀಲ್, ಚೂಡಪ್ಪ ಬೋಬಾಟಿ, ಆನಂದ ಕಂಚನಾಳಕರ, ಸಂತಾನ ಸಾವಂತ, ಸೋಮೇಶ ಹುಂಡೇಕರ, ಜ್ಞಾನೇಶ ಮಾನಗೆ, ಜಯಲಕ್ಷ್ಮೀ ಚವ್ಹಾಣ, ರತ್ನಮಾಲಾ ಮುಳೆ, ರಂಜನಾ ನಡಹಟ್ಟಿ, ವೀಣಾ ಕುಂಬಾರ, ಮೊದಲಾದವರು ಉಪಸ್ಥಿತರಿದ್ದರು.