
ಕಾರವಾರ:
ನಗರದ ರಾಷ್ಟ್ರೀಯ ಹೆದ್ದಾರಿಯ ಏಲ್ಸೇತುವೆ ಹಾಗೂ ಕಡಲ ತೀರದಲ್ಲಿ ಮದ್ಯಪಾನ ಮಾಡುವವರನ್ನು ತಡೆಗಟ್ಟಲು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಅಧಿಕಾರಿಗಳ ತಂಡ ರಚಿಸಿದ್ದಾರೆ.
ಈಚೆಗೆ ಮೇಲ್ಸೇತುವೆ ಹಾಗೂ ಕಡಲ ತೀರದಲ್ಲಿ ಮದ್ಯಪಾನ ಮಾಡಲಾಗುತ್ತಿದೆ. ಅಲ್ಲದೇ ಗಾಜಿನ ಬಾಟಲಿಗಳನ್ನು ಅಲ್ಲಿಯೇ ಒಡೆಯುವುದು ಕಂಡುಬರುತ್ತಿದೆ. ಇದರಿಂದ ಕಡಲ ತೀರದ ವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿದ್ದಾರೆ.
ಕಾರವಾರದ ಉಪ ವಿಭಾಗೀಯ ಅಧೀಕಾರಿ ಹಾಗೂ ತಹಸೀಲ್ದಾರ ಅವರು ಏ.4 ರಂದು ಕೆಲವರ ವಿರುದ್ಧ ಪ್ರಕಟಣ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯು ಐದು ಪ್ರಕರಣ ದಾಖಲಿಸಿ ಒಟ್ಟೂ 500 ರೂ. ದಂಡ, ನಗರಸಭೆಯಿಂದ ಎರಡು ಪ್ರಕರಣದಲ್ಲಿ 200 ರೂ. ಅಬಕಾರಿ ಇಲಾಖೆಯಿಂದ ಎರಡು ಪ್ರಕರಣದಲ್ಲಿ 2,400 ರೂ. ದಂಡ ಸಂಗ್ರಹಿಸಿದ್ದಾರೆ.