
ಕಾರವಾರ:
ತಾಲೂಕಿನ ಅರಗಾದ ಸಂಕ್ರುಬಾಗ ಬಳಿ ಭಾನುವಾರ ಪಿಕಪ್ ಹಾವನವೊಂದು ನೌಕಾನೆಲೆಯ ಕಂಪೌಂಡ್ ಡಿಕ್ಕಿ ಹೊಡೆದಿದೆ.
ಕಾರವಾರದಿಂದ ಹೊನ್ನಾವರಕ್ಕೆ ಸಾಗುತ್ತಿದ್ದ ಪಿಕಪ್ ವಾಹನವು ಅರಗಾದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ವಾಹನವು ನೌಕಾನೆಲೆಯ ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ಪರಿಣಾಮ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಮಾರುತಿ ನಾಯ್ಕ ಎಂಬುವವನಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣವು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.