
ದಾಂಡೇಲಿ : ತಾಲೂಕು ಬಿಜೆಪಿ ಅಧ್ಯಕ್ಷರು ಹಾಗೂ ನಗರಸಭೆಯ ಸದಸ್ಯರಾದ ಬುದವಂತಗೌಡ ಪಾಟೀಲ್ ಅವರ ಮಾತೃಶ್ರೀ ಗಂಗವ್ವಾ ಸಿದ್ದನಗೌಡ ಪಾಟೀಲ್ ಅವರು ಗಾಂಧಿನಗರದ ಸ್ವಗೃಹದಲ್ಲಿ ಶನಿವಾರ ವಿಧಿವಶರಾದರು. ಮೃತರಿಗೆ ೯೩ ವರ್ಷ ವಯಸ್ಸಾಗಿತ್ತು.
ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ, ಮಾತೃ ಹೃದಯದ ಹಾಗೂ ಸರಳ ಸಜ್ಜನಿಕೆಯ ಗಂಗವ್ವಾ ಸಿದ್ದನಗೌಡ ಪಾಟೀಲ್ ಅವರು ಐವರು ಸುಪುತ್ರರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಮಾಜಿ ಶಾಸಕ ಸುನೀಲಹೆಗಡೆ ,
ಗುರು ಮಠಪತಿ,ರವಿ ಗಾಂವ್ಕರ್,ಮಿಥುನ ನಾಯಕ, ಹಾಗೂ ಗಣ್ಯರನೆಕರು ಕಂಬನಿಯನ್ನು ಮಿಡಿದು, ಸಂತಾಪವನ್ನು ಸೂಚಿಸಿದ್ದಾರೆ.