
ದಾಂಡೇಲಿ:
ನಗರದ ಗಾಂಧಿನಗರದಲ್ಲಿ ಮನೆಯೊಂದರಲ್ಲಿ ಕೆಲವು ದಿನಗಳ ಹಿಂದೆ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಸಿಕ್ಕಿಬಿದ್ದಿದ್ದು ಆರೋಪಿಯನ್ನು ಪತ್ತೆ ಹಚ್ಚಿದ ದಾಂಡೇಲಿ ಪೋಲಿಸರು. ಆರೋಪಿ ಅರ್ಷದ ಖಾನನ್ನು ಉತ್ತರ ಪ್ರದೇಶದಲ್ ಲಕ್ನೋದಲ್ಲಿ ಬಂಧಿಸಿದ ದಾಂಡೇಲಿ ಪೋಲಿಸರು. ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ ಮುಂದಿನ ತನಿಖೆಗಾಗಿ ಪೋಲಿಸ ಕಷ್ಟಡಿಯಲ್ಲಿಡಲಾಗಿದೆ. ಎಸ.ಪಿ ಎಂ.ನಾರಾಯಣ ಅವರ ಮಾರ್ಗದರ್ಶನದಲ್ಲಿ ಡಿ.ವೈಎಸ.ಪಿ ಶಿವಾನಂದ ಮದರಖಂಡಿ ಯವರ ನೇತೃತ್ವದಲ್ಲಿ ಸಿ.ಪಿ.ಐ ಜಯಪಾಲ್ ಪಾಟೀಲ ಮಾರ್ಗದರ್ಶನದಲ್ಲಿ ಪಿ.ಎಸ.ಐ ಗಳಾದ ಕಿರಣ ಪಾಟೀಲ ಹಾಗೂ ಕೃಷ್ಣಾ ಅರಿಕೇರಿಯವರ ತಂಡ ಆರೋಪಿಯನ್ನು ಬಂಧಿಸುವದಲ್ಲಿ ಯಶಸ್ವಿಯಾಗಿದ್ದಾರೆ