
ಭಟ್ಕಳ: ಇಸ್ಪೀಟ್ ಎಲೆಗಳ ಮೇಲೆ ಹಣ ಕಟ್ಟಿ ಜೂಜಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಶನಿವಾರ ರಾತ್ರಿ 9:30 ಗಂಟೆಗೆ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗ್ರೆಯ ಬಳಿ ಈ ಘಟನೆ ನಡೆದಿದೆ.
ಬಿ.ಅಶ್ವಿನಿ, ಡಿ.ಎಸ್.ಪಿ, ಸಿ.ಇ.ಎನ್ ಪೊಲೀಸ್ ಠಾಣೆ ಮತ್ತು ಅವರ ತಂಡವು ಪೆಟ್ರೋಲ್ ಬಂಕ್ ಎದುರು ನಡೆದ ಜೂಜು ಕಾರ್ಯಾಚರಣೆಯ ಮೇಲೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಆರೋಪಿಗಳಿಂದ ₹25,390 ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ತಾಲ್ಲೂಕಿನ ಬಸ್ತಿ ಕಾಯ್ಕಿಣಿಯ ನಾರಾಯಣ ಮಟ್ಟಾ ನಾಯ್ಕ, ಮಾವಳ್ಳಿಯ ಸುಬ್ರಹ್ಮಣ್ಯ ಜಯಾ ನಾಯ್ಕ, ಮುಂಡಳ್ಳಿಯ ವಿನೋದ ಸುಬ್ರಾಯ ದೇವಾಡಿಗ, ಸಂದೇಶ ಸುಬ್ರಾಯ ದೇವಾಡಿಗ, ಶಿರಾಲಿ ಗುಮ್ಮನಹಕ್ಕಲದ ಹರೀಶ ನಾಗಪ್ಪ ಆಚಾರಿಸಾ, ತೇರ್ನಮಕ್ಕಿ ಜನತಾ ಕಾಲೋನಿಯ ಮೋಹನ ತಿಮ್ಮಯ್ಯ ನಾಯ್ಕ, ಮುರ್ಡೇಶ್ವರದ ಜಯಂತ ನಾರಾಯಣ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ.
ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 40/2025, ಕಲಂ 80, ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.