
ಕಾರವಾರ:
ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿಯಿಂದ ೨೮ ಭಾರತೀಯರ ನರಮೇಧ ನಡೆದಿದೆ. ಈ ಹಿನ್ನಲೆ ದೇಶವೇ ದುಃಖದಲ್ಲಿರುವ ಕಾರಣ ಕರಾವಳಿ ಉತ್ಸವದ ಮನರಂಜನೆಯನ್ನು ಮುಂದೂಡಬೇಕು ಎಂದು ಕರ್ನಾಟಕ ರಾಜ್ಯ ಸನಾತನ ಧರ್ಮರಕ್ಷಣಾ ವೇಧಿಕೆ ಅಧ್ಯಕ್ಷ ಡಾ. ಗಜೇಂದ್ರ ನಾಯ್ಕ ಹೇಳಿದರು.
ಕಾರವಾರದಲ್ಲಿ ಮಾಯನಾಡಿದ ಅವರು,
ಏ. ೨೨ ರಂದು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಹಿಂದುಗಳ ಹತ್ಯೆ ಖಂಡನೀಯ. ಇಂತಹ ಪರಿಸ್ಥಿತಿಯಲ್ಲಿ ಕರಾವಳಿ ಉತ್ಸವ ನಡೆಸುವುದು ಸರಿಯಲ್ಲ. ಹೀಗಾಗಿ ಉತ್ಸವವನ್ನು ಮುಂದೂಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಮಾಡುತ್ತೇವೆ ಎಂದರು.
ದಾಳಿಯ ಬಳಿಕ ಈಗಾಗಲೇ ಕೇಂದ್ರ ಸರಕಾರವು ಸಿಂದೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸುವುದನ್ನು ನಿಲ್ಲಿಸಿದೆ. ಅಲ್ಲದೇ ನೌಕಾದಳ, ವಾಯು ಪಡೆ ಹಾಗೂ ಗಡಿಯಲ್ಲಿ ಸೇನೆಯು ಸಿದ್ಧ ಪಡಿಸುವ ಮೂಲಕ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ಧ ನಡೆದರೆ ಕಾರವಾರವು ದೇಶದಲ್ಲಿ ಅತಿಸೂಕ್ಷ್ಮ ಪ್ರದೇಶವಾಗಲಿದೆ. ಇಲ್ಲಿನ ನೌಕಾನೆಲೆ ಹಾಗೂ ಅಣು ವಿದ್ಯುತ್ ಸ್ಥಾವರದಿಂದ ವೈರಿಗಳಿಗೆ ಗುರಿಯಾಗಿವ ಸಾಧ್ಯತೆ ಇದೆ. ಹೀಗಿರುವಾಗ ಮನರಂಜನೆಯ ಹೆಸರಿನಲ್ಲಿ ಉತ್ಸವ ಮಾಡಬಾರದು ಎಂದರು.