
ಶಿರಸಿ:
ನಗರದ ಟಿಪ್ಪು ನಗರ ನಿವಾಸಿ ಮತ್ತು ನಿಷೇಧಿತ ಪಿ.ಎಫ್.ಐ. ಕಾರ್ಯಕರ್ತ ಮೌಸಿನ್ ಯಾನೆ ಅಲಿಯಾಸ್ ಇಮ್ಮಿಯಾಜ ಶೂಕುರ್ ಎಂಬ ಆರೋಪಿಯನ್ನ ಶಿರಸಿ ಪೊಲೀಸ ಅಧಿಕಾರೊಗಳು ಬಂಧಿಸಿದ್ದಾರೆ ಎಂದು ಜಿಕ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ತಿಳಿಸಿದ್ದಾರೆ.
ಈ ಕುರಿತು ಶಿರಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು,
ಈತನನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಮೌಸೀನ್ ಇದಕ್ಕೂ ಮುಂಚೆ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಎನ್ಐಎಯಿಂದ ಬಂಧಿತನಾಗಿದ್ದ. ಸಾದಿಕ್ ನನ್ನು ತಯಾರು ಮಾಡಿದವನು ಇವನೇ ಎಂದು ಹೇಳಲಾಗಿತ್ತು. ಅಲ್ಲದೇ, ಶಿರಸಿಯಲ್ಲಿ ನಡೆದ ಐಪಿಸಿ 302 ಪ್ರಕರಣದಲ್ಲೂ ಈತ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಕೆಜಿ ಹಳ್ಳಿ – ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಪಟ್ಟಿಯಲ್ಲಿದ್ದ ಮೌಸೀನ್ ದೀರ್ಘಕಾಲದಿಂದ ಪರಾರಿಯಾಗಿದ್ದ. ಆರೋಪಿ ಸಿಂಧಗಿಯಲ್ಲಿ ನೆಲೆಸಿದ್ದ ಬಗ್ಗೆ ಪೊಲೀಸರು ಪತ್ತೆ ಹಚ್ಚಿ ವಿಶೇಷ ದಾಳಿ ನಡೆಸಿದ್ದರು ಎಂದು ತಿಳಿಸಿದ್ದಾರೆ.