
ಶಿರಸಿ:
ಶಿರಸಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಾತಿ ಕಂಡು ಕೆಂಡಂಮಡಲರಾದ ಶಾಸಕ ಭೀಮಣ್ಣ ನಾಯ್ಕರು ಸಭೆಯನ್ನು ಮುಂದೂಡಿ ಅಲ್ಲಿಂದ ಎದ್ದು ನಡೆದ ಘಟನೆ ನಡೆದಿದೆ.
ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ಶಾಸಕರ ಅದ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಸಭೆಗೆ ಪೂರ್ವ ತಯಾರಿಯೊಂದಿಗೆ ಬರಲು ಅದಿಕಾರಿಗಳಿಗೆ 15 ದಿನ ಮೊದಲೇ ಸೂಚನೆ ನೀಡಿದ್ದರೂ ಕೂಡಾ ಇಂದು ಕೆಲವು ಅದಿಕಾರಿಗಳು ಗೈರಾಗಿದ್ದರು. ಇದನ್ನು ಸಹಿಸದ ಶಾಸಕರು ಜಿಲ್ಲಾದಿಕಾರಿಗಳ ಗಮನಕ್ಕೆ ತಂದು ಹೊರಗೆ ನಡದರು.