
ದಾಂಡೇಲಿ :
ಕೋವಿಡ್ ಸಂದರ್ಭದಲ್ಲಿ ಹುಬ್ಬಳ್ಳಿ ವಯಾ ದಾಂಡೇಲಿ – ಪಣಜಿ ಸಾರಿಗೆ ಬಸ್ ಸಂಚಾರ ಐದಾರು ವರ್ಷಗಳ ನಂತರ ಮತ್ತೆ ಆರಂಭಗೊಂಡಿದ್ದು, ಮೊದಲ ಪ್ರಯಾಣವನ್ನು ಆರಂಭಿಸಿದೆ. ನಗರದ ಬಸ್ ನಿಲ್ದಾಣದಲ್ಲಿ ಪೂಜೆಯನ್ನು ಸಲ್ಲಿಸಿ ಬಸ್ ಸಂಚಾರಕ್ಕೆ ಶುಭವನ್ನು ಕೋರಲಾಯಿತು.
ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಈ ಬಸ್ ಸಂಚಾರವನ್ನು ಪುನರಾರಂಭಿಸಲು ನಗರದ ವಿವಿಧ ಸಂಘ ಸಂಸ್ಥೆಗಳು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದರು.
ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಸಾರಿಗೆ ಘಟಕದ ವ್ಯವಸ್ಥಾಪಕ ಎಲ್.ಎಚ್.ರಾಥೋಡ್ ಅವರು ಬಸ್ಸಿಗೆ ಪೂಜೆಯನ್ನು ಸಲ್ಲಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಸಂಚಾರ ನಿಯಂತ್ರಕ ಹರಳಯ್ಯ ಲೋಗಾವಿ, ನಿರ್ವಾಹಕ ನಿರಂಜನ ಹಿರೇಮಠ ಹಾಗೂ ಸಾರಿಗೆ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿಯಿಂದ ಹೊರಡುವ ಈ ಬಸ್ ಹುಬ್ಬಳ್ಳಿಯಿಂದ ಧಾರವಾಡ, ಹಳಿಯಾಳ ಮಾರ್ಗವಾಗಿ ದಾಂಡೇಲಿಗೆ ಬಂದು, ದಾಂಡೇಲಿಯಿಂದ ಪ್ರತಿ ದಿನ ಬೆಳಿಗ್ಗೆ ೦೮.೪೦ ಗಂಟೆಗೆ ಪ್ರಯಾಣವನ್ನು ಮುಂದುವರಿಸಲಿದೆ. ದಾಂಡೇಲಿಯಿಂದ ಗಣೇಶಗುಡಿ, ರಾಮನಗರ, ಮೋಲೆಂ,ಪೊಂಡಾ ಮಾರ್ಗವಾಗಿ ಪಣಜಿಗೆ ಸಂಚರಿಸಲಿದೆ.