
ಅಂಕೋಲಾ
ತಾಲೂಕಿನ ವಿಭೂತಿ ಜಲಪಾತದಲ್ಲಿ ಈಜಾಡುತ್ತಿದ್ದಾಗ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊರ್ವನನ್ನ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.
ಹೈದರಾಬಾದ್ ಮೂಲದ ಯಶವಂತ ದುವ್ವಾರಿ (26) ರಕ್ಷಣೆಗೊಳಗಾದ ಪ್ರವಾಸಿಗ. ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ವಿಜಯ್ ನಾಯಕ ರಕ್ಷಣೆ ಮಾಡಿದ್ದಾರೆ. ಹೈದರಾಬಾದ್ ದಿಂದ ಒಟ್ಟು 12 ಜನರು ಪ್ರವಾಸಕ್ಕೆಂದು ವಿಭೂತಿ ಜಲಪಾತಕ್ಕೆ ಬಂದಿದ್ದರು. ನೀರಿನಲ್ಲಿ ಈಜಾಡುತ್ತಿದ್ದಾಗ ಒಬ್ಬ ಪ್ರವಾಸಿಗ ಮುಳುಗುತ್ತಿದ್ದನ್ನು ಗಮನಿಸಿದ ಅಲ್ಲಿಯ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.