ದಾಂಡೇಲಿ:
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಚಿ ರಸ್ತೆ ಜನತಾ ವಿದ್ಯಾಲಯದ ಹತ್ತಿರದ ನಿವಾಸಿ ಬಾಬು ರಾಮಪ್ಪ ದೊಡ್ಡಮನಿ, ಈತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು . ಇತನ ಮೇಲೆ 2012 ನೇ ಸಾಲಿನಿಂದ ಈ ವರೆಗೆ 2-ಕೊಲೆ ಯತ್ನ, 3-ದೊಂಬಿ, 1-ಜುಜಾಟ, 1-ಲೈಂಗಿಕ ದೌರ್ಜನ್ಯ, 1-ಹಲ್ಲೆ, 1-ಎಸ್ಸಿ ಎಸ್ಟಿ ಕಾಯ್ದೆ ಅಡಿ ಒಟ್ಟೂ 09 ಪ್ರಕರಣಗಳು ದಾಖಲಾಗಿದ್ದು ಇರುತ್ತದೆ. ಆದ್ದರಿಂದ ದಾಂಡೇಲಿ ನಗರ ಪೊಲೀಸ್ ಠಾಣೆರವರು ಇತನ ವಿರುದ್ಧ ಗಡಿಪಾರಿಗೆ ವಿವರವಾದ ಸೂಕ್ತ ಪ್ರಸ್ತಾವನೆಯ ಅರ್ಜಿಯನ್ನು ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿರುತ್ತಾರೆ. ಗಡಿಪಾರು ಅರ್ಜಿಯನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ಪೋಲಿಸ ಅಧೀಕ್ಷಕರು ಬಾಬು ರಾಮಪ್ಪ ದೊಡ್ಡಮನಿಯನ್ನು ಬೀದರ ಜಿಲ್ಲೆಯ ಬೀದರ ಸಬ್ ಅರ್ಬನ್ ಠಾಣಾ (ಬೀದರ ಶಹರ ಪೊಲೀಸ್ ಠಾಣಾ) ವ್ಯಾಪ್ತಿಗೆ, ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳವರೆಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ ಎಂದು ಪೋಲಿಸ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
