ಶಿರಸಿ : ಶಿರಸಿಯಲ್ಲಿ ಸರಗಳ್ಳತನ ಪ್ರಕರಣವೂ ಸೇರಿದಂತೆ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿ, ಇರಾನಿ ಗ್ಯಾಂಗ್ ನ ಸಕ್ರೀಯ ಸದಸ್ಯನನ್ನು ನಗರದ ಮಾರುಕಟ್ಟೆ ಪೊಲೀಸರು ಆಂಧ್ರ ಪ್ರದೇಶದ ಅನಂತಪುರ ಜಿಲ್ಕೆಯಲ್ಲಿ ಬಂಧಿಸಿ ಕರೆತಂದಿದ್ದಾರೆ.
ಸಯ್ಯದ್ ಇಮ್ರಾನ್ ಎಂದು ಬಂಧಿತನನ್ನು ಗುರುತಿಸಲಾಗಿದೆ. ಇತ್ತೀಚೆಗೆ ಮುಸ್ಲಿಂ ಗಲ್ಲಿಯಲ್ಲಿ ನಡೆದುಹೋಗುತ್ತಿದ್ದ ಮಹಿಳೆಯ ಚೈನ್ ನ್ನು ಬೈಕ್ ನಲ್ಲಿ ಆಗಮಿಸಿ ಈತ ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾಗಿದ್ದಾರೆ. ವಿಚಾರಣೆಯ ವೇಳೆ ಈತ ಇಂತಹ ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ
