ದಾಂಡೇಲಿ :ನಾಳೆ ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ, ಕಾನೂನು ತಜ್ಞರಾದ ಮೋಹನ್ ಲಿಂಬಿಕಾಯಿಯವರಿಗೆ ಪದವೀಧರ ಮತದಾರರು ಮತ ನೀಡಿ ಆಶೀರ್ವದಿಸಬೇಕೆಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಹಲವಾಯಿ ಯವರು ವಿನಂತಿಸಿದರು.
ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಅಂಬೆವಾಡಿಯ ತಹಶೀಲ್ದಾರ್ ಕಚೇರಿಯಲ್ಲಿ ಬೆಳಿಗ್ಗೆ 8.00 ಗಂಟೆ ಯಿಂದ ಸಂಜೆ 4.00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲ ಪದವಿಧರ ಮತದಾರರು ತಪ್ಪದೆ ಮತ ಚಲಾವಣೆ ಮಾಡಬೇಕು. ಅನುಭವಿ ಆಗಿರುವ ಮೋಹನ್ ಲಿಂಬಿಕಾಯಿ ಶಿಕ್ಷಕರ ಮತ್ತು ಸರ್ಕಾರಿ ನೌಕರರಗಳನ್ನು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿ ಆಗಲಿದ್ದಾರೆ ಎನ್ನುವ ಭರವಸೆ ನಮಗೆಲ್ಲರಿಗೂ ಇದೆ ಎಂದ ಅವರು ಮುಂದುವರೆದು ಮಾತನಾಡುತ್ತ ಶಾಸಕರಾದ ಆರ್.ವಿ. ದೇಶಪಾಂಡೆಯವರು ಪ್ರತಿಯೊಬ್ಬ ಮತದಾರರಿಗೂ ಪತ್ರ ತಲುಪಿಸಿ ಲಿಂಬಿಕಾಯಿ ಯವರಿಗೆ ಮತ ನೀಡಬೇಕೆಂದು ವಿನಂತಿಸಿದ್ದಾರೆ, ಹಾಗೆಯೇ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ. ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿರುವುದರಿಂದ ಲಿಂಬೆಕಾಯಿಯವರನ್ನು ಬಹುಮತದಿಂದ ಆರಿಸಿ ತಂದರೆ ಇನ್ನಷ್ಟು ಜನಪರ ಯೋಜನೆಗಳನ್ನು ಜಾರಿಮಾಡಲುಸಾಧ್ಯ. ಹಾಗೆಯೇ ಪದವೀಧರ ಮತದಾರರು ಚುನಾವಣಾ ಬೂತ್ ಅಧಿಕಾರಿಗಳ ಕೊಟ್ಟ ಪೆನ್ನಿನಲ್ಲಿಯೇ 1 ಎಂದು ನಮೂದಿಸಬೇಕೆಂದು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಪಂಚ ಗ್ಯಾರಂಟಿ ಯೋಜನೆಗಳ ತಾಲೂಕ ಅಧ್ಯಕ್ಷರಾದ ರಿಯಾಜ್ ಸಯ್ಯದ್, ಆರ್.ಪಿ. ನಾಯ್ಕ, ಇಕ್ಬಾಲ್ ಶೇಖ್, ಬಶೀರ್ ಗಿರಿಯಾಲ್, ಅನಿಲ್ ದಂಡಗಲ್, ಅನಿಲ ನಾಯ್ಕರ್, ದಿವಾಕರ್ ನಾಯ್ಕ ರಫೀಕ್ ಖಾನ್ ಮೊದಲಾದವರು ಇದ್ದರು.
