ಕಾರವಾರ:
ಕರಾವಳಿ ಹಾಗೂ ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ವಿಶೇಷ ಯೋಜನೆ ರಚಿಸಿದೆ. ಜ. 10 ರಂದು ಈ ಕುರೊತು ಸಭೆ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿದರು.
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಕಾರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಿಶೇಷ ಚಿಂತನೆ ನಡೆಸಿದ್ದೇವೆ. ದಕ್ಷಿಣ ಕನ್ನಡ, ಉಡುಪಿ ಕಾರವಾರದ ಒಟ್ಟೂ 340 ಕಿಲೋಮೀಟರ್ ಕರಾವಳಿಯ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ಯೋಜನೆ ಮಾಡಲು ತೀರ್ಮಾನಿಸಲಾಗಿದೆ.
ಒಂದು ಸುತ್ತಿನ ಮಾತುಕತೆ ಶಾಸಕರೊಂದಿಗೆ ನಡೆದಿದೆ. ಜ.೧೦ ಕ್ಕೆ ಮಂಗಳೂರಿನಲ್ಲಿ ಮೂರು ಜಿಲ್ಲೆಯ ಹಾಗೂ ಮಲೆನಾಡು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಲಿದ್ದೇವೆ. ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಉದ್ಯೋಗ ಸೃಷ್ಠಿಗೆ ಪ್ರಯತ್ನಿಸುತ್ತಿದ್ದೇವೆ.
ಇಲ್ಲಿನ ಯುವಕರು ಬೆಂಗಳೂರು, ಗೋವಾ, ಸೌದಿ ಕಡೆಗೆ ಹೋಗುತ್ತಿದ್ದಾರೆ. ಇಲ್ಲಿನ ಮಾನವ ಸಂಪನ್ಮೂಲವನ್ನು ಇಲ್ಲಿಯೇ ಬಳಸಿಕೊಳ್ಳಬೇಕು. ಅಲ್ಲದೇ ಇಲ್ಲಿನ ನೈಸರ್ಗಿಕ ಸಂಪತನ್ನು ಬಳಸಿಕೊಳ್ಳಬೇಕು ಎಂದರು.
ಮಂಗಳೂರು ವಿಮಾನ ನಿಲ್ದಾಣ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ. ಶಿವಮೊಗ್ಗದಲ್ಲಿಯೂ ವಿಮಾನನಿಲ್ದಾಣ ಆಗುದೆ.
ಕಾರವಾರದಲ್ಲಿಯೂ ವಿಮಾನ ನಿಲ್ದಾಣ ಆಗುತ್ತಿದೆ. ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಂಡು ವಿಮಾನ ನಿಲ್ದಾಣ ಸಿದ್ದವಾಗುತ್ತಿದೆ.
ಜ.10 ಕ್ಕೆ ನಡೆಯುವ ಸಭೆಗೆ ಮುಖ್ಯವಾಗಿ ಬಂಡವಾಳಶಾಹಿಗಳಿಗೆ ಹೊರ ದೇಶದವರೂ ಆಗಮಿಸಬಹುದು. ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎನ್ನುವ ಚಿಂತನೆ ನಡೆಸಲಿದ್ದೇವೆ.
ಜಿಲ್ಲೆಯ ಅಧಿವೃದ್ಧಿಗೆ ಸಾಕಷ್ಟು ಹಣ ನೀಡಿದ್ದೇವೆ.
ಆರೋಗ್ಯ ಕ್ಷೇತ್ರದಲ್ಲಿ 240 ಕೋಟಿ ರೂ ಪ್ರಸ್ತಾವನೆ ಸಿದ್ದಮಾಡಿದ್ದಾರೆ. ಈಗಾಗಲೇ ಜಿಲ್ಲಾಸ್ಪತ್ರೆ ಸಾಕಷ್ಟು ಅಭಿವೃದ್ಧಿಯಾಗಿದೆ. ಶರಾವತಿಯಲ್ಲಿ ಒಂದು ಸ್ಟೋರೇಜ್ ಪಾಯಿಂಟ್ ಮಾಡಲಿದ್ದೇವೆ. ಅದರಿಂದ ಶರಾವತಿಯಿಂದ ಆಗುವ ಉಪಯೋಗ ಹೆಚ್ಚಲಿದೆ. ರಾಜ್ಯಕ್ಕೂ ಒಳ್ಳೆಯದಾಗುತ್ತದೆ. ವಿರೋಧ ಮಾಡುವ ಅಗತ್ಯವಿಲ್ಲ ಎಂದರು.
ಅರಣ್ಯ ಒತ್ತುವರಿಗಾಗಿ ಕಾನೂನು ತಂದಿದ್ದೇವೆ. ಈಗಾಗಲೇ ಅರ್ಜಿ ಹಾಕಿದ್ದಾರೆ. 75 ವರ್ಷ ಎಂದರೆ ಗಾಬರಿಯಾಗಬಾರದು. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ರೈತರನ್ನು ಒಕ್ಕಲೆಬ್ಬಿಸಬಾರದು. ರೈತರು ಪಂಚಾಯಿತಿಯಿಂದಲೇ ಮೂರು ತಲೆಮಾರಿನ ಪ್ರಮಾಣ ಪತ್ರ ಪಡೆದು ನೀಡದರೆ ಸಾಕು. ಈ ಬಗ್ಗೆ ಈಗಾಗಲೇ ಜಿಲ್ಲೆಯ ಶಸಕರು ಮಾಹಿತಿ ನೀಡಿದ್ದಾರೆ. ರೈತರಿಗೆ ರಕ್ಷಣೆ ನೀಡುವುದು ಸರಕಾರದ ಕರ್ತವ್ಯ ಎಂದರು.
ನದಿ ಜೋಡಣೆ ಬಗ್ಗೆ ದೆಹಲಿಯಲ್ಲಿ ಸಭೆ ಮಾಡಿದ್ದೇವೆ. ಡಿಪಿಆರ್ ತಯಾರಿಸಲು ಮುಖ್ಯ ಎಂಜಿನಿಯರ್ ಅವರಿಗೆ ತಿಳಿಸಲಾಗಿದೆ. ಶೇ.90 ರಷ್ಟು ಕೇಂದ್ರ ಹಾಗೂ ಶೇ 10 ರಷ್ಟು ರಾಜ್ಯ ಸರಕಾರದ ಹಣ ಬಳಕೆಯಾಗುತ್ತದೆ. ಜನರ ವಿರೋಧ ಮಖ್ಯ ಅಲ್ಲ. ರೈತರಿಗೆ ಉಪಯೋಗವಾಗಬೇಕು. ಒಳ್ಳೆಯ ಕೆಲಸವಾಗಬೇಕಾದರೆ ವಿರೋಧ ಸಹಜ ಎಂದರು.
ಸಿಆರ್ಝೆಡ್ ವಿಚಾರಕ್ಕೆ ಪರಿಹಾರ ಹುಡುಕುತಿದ್ದೇವೆ. ಕೇಂದ್ರ ಸರಕಾರದ ಅಧಿಕಾರಿಗಳಿಗೂ ಆಹ್ವಾನನೀಸಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಸಮುದ್ರ ತೀರವನ್ನು ಹೇಗೆ ರಕ್ಷಣೆ ನಾಡಬೇಕು ಎನ್ನುವ ಬಗ್ಗೆ ತಿಳಿದು ಕಾರ್ಯರೂಪಕ್ಕೆ ತರುತೇವೆ ಎಂದರು.
ಅಧಿಕಾರ ಹಂಚಿಕೆಯ ಕುರಿತಾಗಿ ಶಾಸಕ ದೇಶಪಾಂಡೆ ಅವರ ಹೇಳಿಕೆ ತಿರುಗೇಟು ನೀಡಿದ ಅವರು, ದೇಶಪಾಂಡೆ ಅವರು ಹಿರಿಯರಿದ್ದಾರೆ ಅವರ ಬಳಿಯೇ ಮಾತನಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್, ಭೀಮಣ್ಣ ನಾಯ್ಕ, ಬಿಜೆಪಿಯ ಉಚ್ಚಾಟಿತ ಶಾಸಕ ಶಿವರಾಮ ಹೆಬ್ಬಾರ ಇದ್ದರು.
