ಯಲ್ಲಾಪುರ:
ಹತ್ಯೆಯಾದ ರಂಜಿತಾ ಅವರ ಪಾರ್ಥಿವ ಶರೀರಕ್ಕೆ ಬಿಜೆಪಿಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಗೌರವ ಸಲ್ಲಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಭಾನುವಾರ ಯಲ್ಲಾಪುರಕ್ಕೆ ಆಗಮಿಸಿದ ಅವರು, ಅಮಾಯಕ ಹಿಂದೂ ಮಹಿಳೆಯೊಬ್ಬರು ಮದುವೆ ಪ್ರಸ್ತಾಪ ತಿರಸ್ಕರಿಸಿದ ಕಾರಣಕ್ಕಾಗಿ ಹಾಡುಹಗಲೇ ಭೀಕರವಾಗಿ ಕೊಲೆಯಾಗಿರುವುದು ದುರಂತ ಮಾತ್ರವಲ್ಲ, ಆತಂಕಕಾರಿಯೂ ಆಗಿದೆ. ಪದೇ ಪದೇ ಇಂತಹ ಸಮಾಜ ವಿರೋಧಿ ಘಟನೆಗಳು, ಆಘಾತಕಾರಿ ದುಷ್ಕೃತ್ಯಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದಿರುವ ಕಾನೂನು ಮತ್ತು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ ಎಂದರು.
