ದಾಂಡೇಲಿ :
ದಾಂಡೇಲಿ ವೃತ್ತದ ಪೊಲೀಸ್ ವೃತ ನಿರೀಕ್ಷಕರಾಗಿ ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ವರ್ಗಾವಣೆಯಾಗಿ ಬಂದಿರುವ ಶಿವಾನಂದ ನಾಗಪ್ಪ ಅಂಬಿಗೇರ ಗುರುವಾರ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಮೂಲತ: ಬೆಳಗಾವಿ ಜಿಲ್ಲೆಯ ಸವದತ್ತಿಯವರಾಗಿರುವ ಶಿವಾನಂದ ನಾಗಪ್ಪ ಅಂಬಿಗೇರ ಅವರು ಕಳೆದ ಅನೇಕ ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಅಧಿಕಾರವನ್ನು ಸ್ವೀಕರಿಸಿದ ಸಿಪಿಐ ಶಿವಾನಂದ ನಾಗಪ್ಪ ಅಂಬಿಗೇರ ಅವರನ್ನು ಪಿಎಸ್ಐಗಳಾದ ಶಿವಾನಂದ ನಾವದಗಿ, ಅಮೀನ್ ಅತ್ತಾರ ಮತ್ತು ಜಗದೀಶ ನಾಯ್ಕ ಹಾಗೂ ದಾಂಡೇಲಿ ವೃತ್ತದ ಎಎಸ್ಐಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಗೌರವಪೂರ್ವಕವಾಗಿ ಸ್ವಾಗತಿಸಿದರು.
