ಕಾರವಾರ:
ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 1.26 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಸೋಮವಾರ ಚಿತ್ತಾಕುಲ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಮೂಲದ ನಾರಾಯಣ ಗಜಾನನ ದಲಬಂಜನ ಮದ್ಯ ಸಾಗಿಸುತ್ತಿದ್ದ ಆರೋಪಿ. ಈತನು ಮುಡಗೇರಿ ಕಡೆಯಿಂದ ಸದಾಶಿವಗಡ ಕಡೆಗೆ ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ. ಇಲ್ಲಿನ ಚಿಂಚೇವಾಡದ ಐಸ್ ಫ್ಯಾಕ್ಟರಿ ಬಳಿ ಪೊಲೀಸರು ದಾಳಿ ನಡೆಸಿದ್ದು ಅಕ್ರಮ ಮದ್ಯ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಚಿತ್ತಾಕುಲಾ ಪೊಲೀಸ ಠಾಣೆಯ ಪಿಎಸ್ಸೈ ಪರಶುರಾಮ ಮಿರ್ಜಗಿ, ಎಎಸ್ಐ ಸಂತೋಷ ಟಿ. ನಾಯ್ಕ, ಸಿಬ್ಬಂದಿಯಾದ ಗೌತಮ ರೊಡ್ಡನವರ, ವಿನಯ ಕಾಣಕೋಣಕರ, ಬಸಪ್ಪಾ ಕಿತ್ತೂರ, ಅಭಿಜಿತ್ ಅರ್. ಎಲ್ ಹಾಗೂ ಪ್ರದೀಪ ಇದ್ದರು.
ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
