ದಾಂಡೇಲಿ :
ಸಾಮಾಜಿಕ ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಇದರ 50ನೇ ವರ್ಷದ ಚಾರ್ಟರ್ ನೈಟ್ ಸಂಭ್ರಮವಾದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ದಾಂಡೇಲಿಯ ಲಯನ್ಸ್ ಕ್ಲಬ್ ಇದೇ ಜ.28 ರಂದು ಸಂಜೆ 6:00ಗಂಟೆಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಡಿಲೆಕ್ಸ್ ಸಭಾಭವನದಲ್ಲಿ ಆಯೋಜಿಸಿದೆ ಎಂದು ದಾಂಡೇಲಿಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಗೌರಿ ಎಸ್.ಹಂಚಿನಾಳಮಠ ತಿಳಿಸಿದ್ದಾರೆ.
ಅವರು ಸೋಮವಾದ ನಗರದಲ್ಲಿ ಈ ಕಾರ್ಯಕ್ರಮದ ಕುರಿತಂತೆ ಮಾಧ್ಯಮಕ್ಕೆ ವಿವರಣೆಯನ್ನು ನೀಡಿದರು. ಲಯನ್ಸ್ ಕ್ಲಬ್ಬಿನ ಈ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆಯವರು ಹಾಗೂ ಲಯನ್ಸ್ ಕ್ಲಬ್ಬಿನ ಜಿಲ್ಲಾ ಪ್ರಾಂತಪಾಲರಾದ ಜೈ ಅಮೋಲ್ ಜೆ.ನಾಯ್ಕ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಲಯನ್ಸ್ ಕ್ಲಬ್ಬಿನ ಪ್ರಮುಖರಾದ ರಾಜಶೇಖರ ಹಿರೇಮಠ, ಉಲಾರಿಕ್ ರೋಡ್ರಿಗಸ್, ಮೋನಿಕಾ ಸಾವಂತ, ಡಾ.ಕೀರ್ತಿ ಜೆ.ನಾಯ್ಕ ಹಾಗೂ ಕಾರ್ಯಕ್ರಮದಲ್ಲಿ ಯುವ ಪ್ರತಿನಿಧಿಯಾಗಿ ಶಿವಕುಮಾರ್ ಎಸ್.ಹಂಚಿನಾಳಮಠ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರುಬಿನಾ ಕೌಸರ್ ಇಮ್ತಿಯಾಜ್ ಅತ್ತಾರ, ಖಜಾಂಚಿ ಸುಮಂಗಲ ಚಿಕ್ಕಮಠ, ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಇಮ್ತಿಯಾಜ್ ಅತ್ತಾರ್, ಲಯನ್ಸ್ ಕ್ಲಬ್ ಪ್ರಮುಖರಾದ ಡಾ.ಶೇಖರ ಹಂಚಿನಾಳಮಠ ಮತ್ತು ಉದಯ ಶೆಟ್ಟಿ ಉಪಸ್ಥಿತರಿದ್ದರು.
