ಕಾರವಾರ:
ಜೋಯಿಡಾ ತಾಲೂಕಿನ ಉಳುವಿಯಲ್ಲಿ ಫೆ.3 ರಿಂದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮಹಾರಥೋತ್ಸವವು ನಡೆಯಲಿದ್ದು ತಾಲೂಕಿನಾದ್ಯಂತ ಮದ್ಯ ಮಾರಾಟ ಹಾಗು ಸಾಗಾಟವನ್ನು ನಿಷೇಧಿಸಲಾಗಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಫೆ.2 ರ ಬೆಳಗ್ಗೆ 6 ಗಂಟೆಯಿAದ ಫೆ.4 ರ ಬೆಳಿಗ್ಗೆ 6 ಗಂಟೆಯವರೆಗೆ ಜೋಯಿಡಾ ತಾಲೂಕಿನಾದ್ಯಂತ ಎಲ್ಲಾ ಮದ್ಯದಂಗಡಿ, ವೈನ್ ಶಾಪ್ ಬಂದ್ ಮಾಡುವಂತೆ ಹಾಗೂ ಮದ್ಯ ಸಾಗಾಟ ಹಾಗೂ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
