ಉತ್ತರ ಕನ್ನಡ:
ಭಾರತದ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ರವರು ಭಾನುವಾರ ಶ್ರೀಕ್ಷೇತ್ರ ಬಂಗಾರಮಕ್ಕಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೀರಾಂಜನೇಯ ದೇವರ ಆಶೀರ್ವಾದ ಪಡೆದರು.
ಕರ್ನಾಕದವರೇ ಅಗಿದ್ದು ಭಾರತೀಯ ಕ್ರಿಕೇಟ್ ತಂಡದಲ್ಲಿ ಅಬ್ಬರಿಸುತ್ತರುವ ಕೆ.ಎಲ್ ರಾಹುಲ್ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾರೆ ಸದ್ಯ ನಡೆಯುತ್ತಿರುವ T20 Worldcup ನಲ್ಲಿ ಸ್ಥಾನ ಗಳಿಸಲು ವಿಫಲವಾದ ರಾಹುಲ್ ಅವರು ಮುಂಬರುವ IPL ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲು ತಯಾರಿ ನಡೆಸುತಿದ್ದಾರೆ. ಇಂದು ಇವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಬಂಗಾರಮಕ್ಕಿಯ ವೀರಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದ್ದ ಅವರನ್ನು ಗುರುಗಳಾದ ಶ್ರೀ ಮಾರುತಿ ಗುರೂಜಿ ಅವರು ಆಶಿರ್ವಧಿಸಿದರು.
