ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ 34ನೇ ಪ್ರತಿಷ್ಠಾ ವರ್ಧಂತಿ ಉತ್ಸವವು ಬುಧವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಗಿನಿಂದಲೆ ದೇವತಾ ಕಾರ್ಯ ಪ್ರಾರಂಭಗೊಂಡು, ಶ್ರೀ.ದೇವರ ಪ್ರಾರ್ಥನೆ, ಶ್ರೀ.ಗಣಪತಿ ಪೂಜನ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಶತಕಲಶಾಭಿಷೇಕ, ಲಘು ವಿಷ್ಣು ಹವನ, ಮಹಾ ನೈವೇದ್ಯ, ಹವನ, ಪೂರ್ಣಾಹುತಿ, ಶ್ರೀ. ದೇವರಿಗೆ ಶತಕಲಾಶಭಿಷೇಕ, ಮಹಾಪೂಜೆ, ಮಹಾಮಂಗಳಾರತಿಯು ಜರುಗಿತು. ಮಹಾಪೂಜೆಯಾದ ಬಳಿಕ ಮಧ್ಯಾಹ್ನ ಅನ್ನಸಂರ್ಪಣೆಯನ್ನು ಏರ್ಪಡಿಸಲಾಗಿತ್ತು.
ಪ್ರತಿಷ್ಠಾ ವರ್ಧಂತಿ ಮಹೋತ್ಸವದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ, ಶ್ರೀ.ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಜಿ.ಎಸ್.ಬಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಗೂ ಜಿ.ಎಸ್.ಬಿ ಸಮಾಜ ಬಾಂಧವರು ಭಾಗವಹಿಸಿದ್ದರು.
