ಬೆಂಗಳೂರು :
ಬಾಬಾ ಸಾಹೇಬರ ಸಂವಿಧಾನದ ಶಕ್ತಿಯ ಪರಿಣಾಮ ಇದು. ಉತ್ತರ ಕನ್ನಡ ಜಿಲ್ಲೆಯ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಸಿದ್ದಿ ಎನ್ನುವ ಸಣ್ಣ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಶಾಂತಾರಾಮ ಸಿದ್ದಿ ಅವರು ವಿಧಾನ ಪರಿಷತ್ ಸ್ಪೀಕರ್ ಸ್ಥಾನದಲ್ಲಿ ಕುಳಿತು ಸದನ ನಡೆಸಿದರು. ಈ ದೇಶದ ಸಂವಿಧಾನದ ಮೇಲೆ ಇನ್ನೂ ಗೌರವ ಹೆಚ್ಚಾಗುವಂತೆ ಮಾಡಿದೆ. ಸಣ್ಣ ಸಣ್ಣ ಸಮುದಾಯಕ್ಮೆ ರಾಜಕೀಯ ಪ್ರಾತಿನಿತ್ಯ ಸಿಗಬೇಕು ಎನ್ನುವದು ಜನರ ಆಶಯ.
