ಕಾರವಾರ:
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಯಾಗಿದ್ದ ಅಂಕೋಲದ ಗೋಪಾಲಕೃಷ್ಣ ನಾಯಕ ಇವರ ಮೇಲಾದ ಹಲ್ಲೆಯನ್ನು ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್ ಪತ್ರಿಕಾ ಹೇಳಿಕೆ ಮೂಲಕ ತೀವ್ರ ವಾಗಿ ಖಂಡಿಸಿದ್ದಾರೆ.
ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ತಾನು ಬೆಂಗಳೂರಿನಲ್ಲಿದ್ದೇನೆ. ಗೋಪಾಲ ಕೃಷ್ಣ ನಾಯಕ ಇವರ ಮೇಲಾದ ಹಲ್ಲೆ ಸುದ್ದಿ ತಿಳಿದ ತಕ್ಷಣ ತಾನು ಸಂಬಂಧಿತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಅಪರಾಧಿಗಳನ್ನು ಬಂಧಿಸುವ ಕೆಲಸ ಮಾಡಬೇಕೆಂದು ಸೂಚಿಸಿದ್ದೇನೆ. ಮಾತ್ರವಲ್ಲದೆ ಇದರ ಹಿಂದೆ ಇರುವ ಷಡ್ಯಂತ್ರ ವನ್ನು ಕೂಡಾ ಬಯಲು ಮಾಡಬೇಕೆಂದು ಪೋಲೀಸರಲ್ಲಿ ಒತ್ತಾಯಿಸಿದ್ದೇನೆ, ತನ್ನ ವಿಧಾನ ಸಭಾ ಕ್ಷೇತ್ರದಲ್ಲಿ ಈ ರೀತಿಯ ಕ್ರಿಮಿನಲ್ ಕೃತ್ಯ ನಡೆಸಿ ಶಾಂತಿ ಕದಡುವುದನ್ನು ತಾನು ಸಹಿಸುವುದಿಲ್ಲ ಎಂದು ಶಾಸಕ ಸತೀಶ ಕೆ ಸೈಲ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
