ದಾಂಡೇಲಿ :
ನಗರದ ಶ್ರೀ ವೀರಶೈವ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ವೈದ್ಯರು ಹಾಗೂ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಶಿಕ್ಷಣ ಸಂಸ್ಥೆಯ ಪ್ರಮುಖರು ಹಾಗೂ ಸಮಾಜ ಸೇವಕರಾದ ಡಾ.ಶೇಖರ ಹಂಚಿನಾಳಮಠ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಗೌರವಾಧ್ಯಕ್ಷರಾಗಿದ್ದ ಕೆ.ಬಿ.ನಂಜುಂಡಪ್ಪ ಅವರಿಂದ ತೆರವಾಗಿದ್ದ ಈ ಸ್ಥಾನಕ್ಕೆ ಡಾ.ಶೇಖರ ಹಂಚಿನಾಳಮಠ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶ್ರೀ ವೀರಶೈವ ಸೇವಾ ಸಮಿತಿಯ ಅಧ್ಯಕ್ಷ ಬಸವರಾಜ ಕಲಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಶ್ರೀ ವೀರಶೈವ ಸೇವಾ ಸಮಿತಿಯ ನೂತನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಡಾ.ಶೇಖರ ಹಂಚಿನಾಳಮಠ ಅವರನ್ನು ಸಮಾಜ ಬಾಂಧವರು ಅಭಿನಂದಿಸಿದ್ದಾರೆ.
