ದಾಂಡೇಲಿ –
ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕುಸ್ತಿಪಟುಗಳಾದ ರೋಹನ್ ಸಿದ್ಧಿ ಹಾಗೂ ಶಾಲಿನಾ ಸಿದ್ಧಿಯವರು ಛತ್ತೀಸಗಡದಲ್ಲಿ ನಡೆದ ೨೦೨೬ನೇ ಸಾಲಿನ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ ರೋಹನ್ ಸಿದ್ಧಿ ೬೦ಕೆ.ಜಿ. ವಿಭಾಗದಲ್ಲಿ ಬಂಗಾರ ಪದಕವನ್ನು ಹಾಗೂ ಮಹಿಳಾ ವಿಭಾಗದಲ್ಲಿ ಕುಮಾರಿ ಶಾಲಿನಿ ಸಿದ್ಧಿ ೫೭ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದು ಮಹಾವಿದ್ಯಾಲಯದ ಹಾಗೂ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಆರ್.ವಿ ದೇಶಪಾಂಡೆಯವರು ಹಾಗೂ ಸರ್ವ ಸದಸ್ಯರು, ಪ್ರಾಚಾರ್ಯರಾದ ಡಾ. ಎಂ.ಡಿ. ಒಕ್ಕುಂದ, ದೈಹಿಕ ನಿರ್ದೇಶಕರಾದ ಶ್ರೀ ಬಸವರಾಜ ಹೂಲಿಕಟ್ಟಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
