ಗೋಕರ್ಣ:
ಇಲ್ಲಿನ ಮೇನ್ ಬೀಚ್ನಲ್ಲಿ ಸಮುದ್ರದ ದಡದಲ್ಲಿ ಆಟವಾಡುತ್ತಿದ್ದ ವೇಳೆ ಒಬ್ಬ ವ್ಯಕ್ತಿಗೆ ಪಿಟ್ಸ್ (fits) ಬಂದು ನೀರಿನಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ.
ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿಗಳು ಮತ್ತು ಬೀಚ್ ಸೂಪರ್ವೈಸರ್ಗಳ ಸಹಾಯದಿಂದ ಅವರನ್ನು ಮೇಲಕ್ಕೆ ತಂದು ಪ್ರಾಥಮಿಕವಾಗಿ ಕೈಕಾಲು ಉಜ್ಜಿ ಸ್ವಲ್ಪ ಚೇತರಿಕೆ ಮಾಡಲಾಯಿತು. ನಂತರ ತಕ್ಷಣ ಆಂಬುಲೆನ್ಸ್ ಕರೆಸಿ, ಸ್ಟ್ರೆಚರ್ ಮೂಲಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಶಿಕಾರಿಪುರದಿಂದ 24 ಜನ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ಬಂದಿದ್ದರು.ಪ್ರಮೋದ್ ಜಯಪ್ಪ 20 ವರ್ಷ ಅನಾರೋಗ್ಯಕ್ಕೆ ತುತ್ತಾದ ಪ್ರವಾಸಿಗನಾಗಿದ್ದು ಈತನು ದಂತ ವೈದ್ಯಕೀಯ ಎರಡನೇ ವರ್ಷದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
