ದಾಂಡೇಲಿ: ನಗರದ ಟಿ.ಆರ.ಟಿ ಕ್ರಾಸ್ ವಾಟರ್ ಟ್ಯಾಂಕ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಂಗಳವಾರಾ ರಾತ್ರಿ ೧೧ ಗಂಟೆಯ ಸಮಯಕ್ಕೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಲು ಸಹಿತ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಗಾಂಧಿನಗರದ ನಿವಾಸಿ ಅಲಿಸಾಬ ರಾಜೇಸಾಬ ಸಿದ್ದಿನಾಯ್ಕ (೭೫) ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನಗರ ಠಾಣೆಯ ಕಿರಣ್ ಪಾಟೀಲ್ ಅವರು ಪೊಲೀಸರ ಜತೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಆರೋಪಿಯಿಂದ ೧೫೦೦೦ಸಾವಿರ ರೂ. ಮೌಲ್ಯದ ೨೭೦ಗ್ರಾಂ ತೂಕದ ಹಸಿ ಮತ್ತು ಒಣಗಿದ ಗಾಂಜಾವನ್ನು ಚೀಲ ಸಮೇತ ವಶಪಡಿಸಿಕೊಂಡಿದ್ದಾರೆ. ಪಿಎಸ್ಐ ಅಮೀನ್ ಅತ್ತಾರ ಮುಂದಿನ ತನಿಖೆ ಕೈಗೊಂಡಿದ್ದಾರೆ.
