ದಾಂಡೇಲಿ :ದಾಂಡೇಲಿ ನಗರ ಪೋಲಿಸ ಠಾಣೆ ವ್ಯಾಪ್ತಿಯ ಪಟೇಲ ನಗರದ ಈದ್ಗಾ ಮೈದಾನದಲ್ಲಿ ಸೋಮವಾರ ರಾತ್ರಿ ಬಕ್ರೀದ್ ಹಬ್ಬದ ನಿಮಿತ್ತ ವಧೆ ಮಾಡಲು ಸುಮಾರು ೨, ೦,೧೦೦೦ ರೂಪಾಯಿ ಮೌಲ್ಯದ ೨೨ ಜಾನುವಾರುಗಳನ್ನು ಖರಿದಿ ಮಾಡಿ ಸಾಗಾಟ ಮಾಡಿಕೊಂಡು ಬಂದು ಈದ್ಗಾ ಮೈದಾನದಲ್ಲಿ ಸಾಲಾಗಿ ಗಿಡಗಳಿಗೆ ಹಗ್ಗದಿಂದ ಕಟ್ಟಿ ಹಾಕಿ ಜಾನುವಾರುಗಳಿಗೆ ಸರಿಯಾಗಿ ಮೆವು ನೀಡದೆ ಹಿಂಸೆ ಮಾಡಿದ ಬಗ್ಗೆ ಕಲಂ ೪,೫,೭ ಮತ್ತು ೧೨(೧),೧೨(೨),೧೨(೩) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ ೨೦೨೦ ಪ್ರಕಾರ ಪಟೇಲ ನಗರದ ಈದ್ಗಾ ಮೈದಾನ ಕಮಿಟಿಯವರ ಮೇಲೆ ನಗರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನಲೆ:ಸೋಮವಾರ ರಾತ್ರಿ ಪಟೇಲನಗರದ ಇದ್ಗಾ ಮೈದಾನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಟ್ಟಿಹಾಕದ್ದಾರೆಂಬ ಖಚಿತ ಮಾಹಿತಿಯ ಮೇಲೆ ಹಿಂದೂ ಸಂಘಟನೆಯವರು ಸ್ಥಳಕ್ಕೆ ಭೇಟಿ ನೀಡಿದಾಗ ಜಾನುವಾರುಗಳನ್ನು ಬಕ್ರೀದ್ ಹಬ್ಬಕ್ಕೆ ವದೆ ಮಾಡಲೆಂದು ಕಟ್ಟಿಹಾಕಿದನ್ನು ಕಂಡು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಡಿವೈಎಸಪಿ ಶಿವಾನಂದ ಮದರಖಂಡಿ ಹಾಗೂ ಸಿಪಿಐ ಶಿವಾನಂದ ಅಂಬಿಗೆರ ಅವರ ನೇತ್ರತ್ವದಲ್ಲಿ ಪಿಎಸ ಐ ಅಮೀನ ಅತ್ತಾರ , ಕೀರಣ ಪಾಟಿಲ ಹಾಗೂ ಪೋಲಿಸ ಸಿಬ್ಬಂಧಿಗಳು ಮುಂಜಾಗೃತ ಕ್ರಮವಾಗಿ ಯಾವುದೆ ಅ ಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡು ೨೨ ಜಾನುವಾರುಗಳನ್ನು ಹಳಿಯಾಳದ ದುಸಗಿ ಗೊ ಶಾಲೆಗೆ ಕಳುಹಿಸಿ ಪಟೇಲ ನಗರ ಈದ್ಗಾ ಮೈದಾನದ ಕಮಿಟುಯವರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಇ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಹಾಗೂ ಮುಸ್ಲಿಂ ಬಾಂಧವರು ಪಟೇಲನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೋಲಿಸ ಠಾಣೆಯಲ್ಲಿ ನಡೆದ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಪೋಲಿಸ ಅಧಿಕಾರಿಗಳ ಮುಂದೆ ಮುಸ್ಲಿಂ ಮುಖಂಡರು ಎತ್ತು ಆಕಳುಗಳನ್ನ ಬಲಿ ಕೊಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದರು ಆದರೆ ಇಗ ಇ ಜಾನುವಾರುಗಳನ್ನು ಹಬ್ಬಕ್ಕೆ ವಧೆ ಮಾಡಲು ತಂದಿದ್ದು ಸರಿಯೆ ಎಂದು ಹಿಂದೂ ಸಸಮಾಜದ ಮುಖಂಡರು ಪ್ರಶ್ನಿಸಿದ್ದಾರೆ.
