ದಾಂಡೇಲಿ: ಇಗ ದಾಂಡೇಲಿಯ ಕಾಳಿ ನದಿಯಲ್ಲಿ ಕತ್ತಲ ರಾತ್ರಿಯಲ್ಲಿ ಅಕ್ರಮ ಮರಳು ದಂಧೆ ಯಾರ ಹಂಗಿಲ್ಲದೆ ಬಿಂದಾಸ್ ಆಗಿ ನಡೆಯುತ್ತಿದ್ದಿದ್ದು ಈ ಬಗ್ಗೆ ಇಲಾಖಾ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡರಾಗಿರುವುದೇ ಇದೀಗ ಜನವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ರಾಮನಗರದ ಪಾಂಡರಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುವುದು ಎಲ್ಲರಿಗೂ ಗೊತ್ತಿದ್ದ ವಿಷಯ.ಇಗ ದಾಂಡೇಲಿಯ ಕೋಗಿಲಬಾನ ಹಾಗೂ ಬೈಲಪಾರ ಮತ್ತು ಬಿರಂಪಾಲಿಯಲ್ಲಿ ಹಾಗೂ ಪ್ರದಾನಿ ಗ್ರಾಮದಿಂದ ಕೊಡಲಿ ಹೋಗುವ ಮಾರ್ಗದಲ್ಲಿ ಸಿಗುವ ನಾಲಾಗಳಲ್ಲಿ ಹರಿಯುವ ಕಾಳಿ ನದಿಯ ತಟದಲ್ಲಿ ಅಕ್ರಮವಾಗಿ ರಾತ್ರಿ ಮರಳು ತೆಗೆಯುತ್ತಿದ್ದು ಮುಂಜಾನೆ ನಗರದ ಹಲವೆಡೆ ದಾಸ್ತಾನು ಮಾಡಿ ಇಡಲಾಗುತ್ತದೆ.ಅಕ್ರಮ ಮರಳು ದಂಧೆಕೋರರು ಸೇರಿ ಈ ಮರಳು ಸಾಗಾಟದ ಕಳ್ಳ ದಂಧೆಯನ್ನ ನಡೆಸಿದ್ದಾರೆ.
ಕಾಳಿ ನದಿಯಲ್ಲಿ ಜನರ ಮೂಲಕ ಮರಳನ್ನು ಮೇಲೆತ್ತಿ ನಿತ್ಯ ರಾತ್ರಿ ಟ್ರ್ಯಾಕ್ಟರಗಳ ಮೂಲಕ ನಗರದ ಹಲವೆಡೆ ದಾಸ್ತಾನು ಮಾಡಿ ಅಲ್ಲಿಂದ ನಗರದ ಇತರೆ ಭಾಗಗಳಿಗೆ ಸಾಗಿಸಲಾಗುತ್ತದೆ. ಹೀಗೆ ಅಕ್ರಮ ಮರುಳನ್ನು ಹೊತ್ತು ಸಾಗುವ ಟ್ರ್ಯಾಕ್ಟರಗಳಿಗೆ ಬೈಲಪಾರ ಮತ್ತು ಕೋಗಿಲಬಾನದಲ್ಲಿರುವ ಅರಣ್ಯ ಇಲಾಖೆಯ ಚೆಕಪೊಸ್ಟಗಳು 24×7 ಒಪನಾಗಿರುತ್ತದೆ.
ಕೋಗಿಲಬಾನದಲ್ಲಿರುವ ಚೆಕಪೊಸ್ಟನ ಬೂಮ್ ಬ್ಯಾರಿಯರ್ ರಸ್ತೆ ಬದಿಯಲ್ಲಿ ಮುರಿದು ಬಿದ್ದಿದ್ದು ಚೆಕಪೊಸ್ಟಗೂ ಬಿಗ ಜಡಿಯಲಾಗಿದೆ.
ಈ ಅಕ್ರಮ ಉಸುಕು ಹೊತ್ತ ಟ್ರ್ಯಾಕ್ಟರ ಹಾಗೂ ಟಿಪ್ಪರಗಳು ದಾಂಡೇಲಿಗಂತು ನಿತ್ಯ ಬರುತ್ತವೆ. ಇದೀಗ ದಾಂಡೇಲಿಯ ಹಲವಾರು ರಸ್ತೆಗಳಲ್ಲಿ ಈ ಅಕ್ರಮ ಮರಳಿನ ದಾಸ್ತಾನು ಇರುವುದನ್ನು ಕಾಣಬಹುದಾಗಿದೆ. ಹೀಗೆ ದಾಸ್ತಾನು ಇಟ್ಟಿರುವ ಮರಳುಗಳಿಗೆ ಯಾವ ಲೈಸೆನ್ಸ್ ಇರುವುದಿಲ್ಲ. ಇಂತಹ ಮರಳು ರಾಶಿಗಳ ಮೇಲೆ ಇಲಾಖೆಯವರು ದಾಳಿ ನಡೆಸಿ ಕ್ರಮ ಕೈಗೊಳ್ಳುವ ಸಾಧ್ಯತೆಗಳಿದ್ದರೂ ಕೂಡ ಅವರು ಕಂಡು ಕಾಣದಂತೆ ಜಾಣ ಕುರುಡರಾಗಿರುವುದೇ ಪ್ರಶ್ನೆಯಾಗಿದೆ.
ಕೇಲವು ಸ್ಥಳದಲ್ಲಿ ಯಾವುದೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯದೆ ಇದ್ದರು ರಾಶಿಗಟ್ಟಲೆ ಮರಳನ್ನು ದಾಸ್ತಾನು ಮಾಡಲಾಗಿದೆ
ಪಾಂಡರಿ ನದಿಯಿಂದ ಅಕ್ರಮ ಮರಳು ದಂಧೆ ಇಗ ಕಾಳಿನದಿಯ ತಟಕ್ಕು ಬಂದಿದ್ದು ಇದೆ ರೀತಿ ಮರಳನ್ನು ತೆಗೆಯುತ್ತಿದ್ದರೆ ಈ ನದಿಗಳು ತಮ್ಮ ಮೂಲ ಗುಣಲಕ್ಷಣಗಳನ್ನು ಕಳೆದುಕೊಂಡು ಮತ್ತು ಅವುಗಳ ಪರಿಸರ ವ್ಯವಸ್ಥೆಗಳಿಗೆ ಬದಲಾಯಿಸಲಾಗದ ಹಾನಿಯನ್ನುಂಟುಮಾಡುತ್ತವೆ
ಸಂಬಂಧಪಟ್ಟ ಅಧಿಕಾರಿಗಳು ಇನ್ಮುಂದೆಯಾದರು ಎಚ್ಚೆತ್ತುಕೊಳ್ಳುತ್ತಾರೆಯೆ? ಎಂದು ಕಾದು ನೋಡಬೇಕಾಗಿದೆ.
