ಜೊಯಿಡಾ, ಬನವಾಸಿ, ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಮಟ್ಕಾ ಆಡಿಸುವವರ ವಿರುದ್ಧ ಪೊಲೀಸರು ತಮ್ಮ ದಾಳಿ ಮುಂದುವರೆಸಿದ್ದಾರೆ. ಈ ವೇಳೆ ದಾಂಡೇಲಿಯಲ್ಲಿ ಮಟ್ಕಾ ಬುಕ್ಕಿಯೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜೊಯಿಡಾದ ಕುಂಬಾರವಾಡ ಬಳಿಯ ಕಾತೇಲಿಯ ಪ್ರಾನ್ಸಿಸ್ ಡಿಸೋಜಾ ಅವರು ಮಟ್ಕಾ ಆಡಿಸುವಾಗ ಜೊಯಿಡಾ ಪಿಎಸ್ಐ ಮಹೇಶ ಮಾಳಿ ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಜೊಯಿಡಾ ಬಸ್ ನಿಲ್ದಾಣದ ಆಸ್ಪತ್ರೆ ಕ್ರಾಸಿನ ಬಳಿ ಮಟ್ಕಾ ಆಡಿಸುವಾಗ ಪೊಲೀಸರು ದಾಳಿ ನಡೆಸಿದ್ದು, ಅವರು ಸಂಗ್ರಹಿಸಿದ್ದ 180ರೂ ವಶಕ್ಕೆಪಡೆದಿದ್ದಾರೆ. ಹಳಿಯಾಳದ ತೆರಗಾವಿನ ದಿಲೀಪ ನಾಗೇಂದ್ರ ನರೇಂದ್ರ ಅವರು ತೆರಗಾವ್ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ಹಳಿಯಾಳ ಪಿಎಸ್ಐ ಬಸವರಾಜ ಮಬನೂರು ಅವರು ದಾಳಿ ನಡೆಸಿ ಅವರು ಸಂಗ್ರಹಿಸಿದ್ದ 380ರೂ ವಶಕ್ಕೆಪಡೆದಿದ್ದಾರೆ. ಹಳಿಯಾಳದ ತೆರಗಾಂವಿನ ಹೊಟೇಲ್ ಕೆಲಸಗಾರ ರಾಘವೇಂದ್ರ ಅವಲಕ್ಕಿ ಅವರು ತೆರಗಾಂವಿನ ನವಗ್ರಹ ದೇವಸ್ಥಾನದ ಬಳಿ ಮಟ್ಕಾ ಆಡಿಸುತ್ತಿರುವುದನ್ನು ಅಲ್ಲಿನ ಪಿಎಸ್ಐ ಕೃಷ್ಣಗೌಡ ಆರಿಕೇರಿ ಅವರು ಪತ್ತೆ ಮಾಡಿದರು. ಈ ದಾಳಿಯಲ್ಲಿ ಅವರು ಆರೋಪಿ ಜನರಿಂದ ಸಂಗ್ರಹಿಸಿದ್ದ 360ರೂ ವಶಕ್ಕೆಪಡೆದರು.
ಶಿರಸಿಯ ಬನವಾಸಿ ಬಳಿಯ ಉಂಚಳ್ಳಿ ಕೆರೆಕೊಪ್ಪದ ರಾಘವೇಂದ್ರ ನಾರಾಯಣ ನಾಯ್ಕ ಅವರು ಪಾನ್ಶಾಪ್ ಮಾಲಕರಾಗಿದ್ದು, ತಮ್ಮ ಆದಾಯ ವೃದ್ದಿಗಾಗಿ ಮಟ್ಕಾ ಆಡಿಸುವುದಕ್ಕೆ ಹೋಗಿದ್ದರು. ಕೊರ್ಲಕಟ್ಟಾ ಕೆರೆಯ ಬಳಿ ಮಟ್ಕಾ ಆಡಿಸುವಾಗ ಬನವಾಸಿ ಪಿಎಸ್ಐ ರವೀಂದ್ರ ಬೀರಾದರ್ ಅವರು ದಾಳಿ ನಡೆಸಿ, ಅವರು ಸಂಗ್ರಹಿಸಿದ್ದ 710ರೂಪಾಯಿಗಳನ್ನು ವಶಕ್ಕೆಪಡೆದರು.
ದಾಂಡೇಲಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಟ್ಕಾ ಆಡಿಸುವವರ ಜೊತೆ ಮಟ್ಕಾ ಬುಕ್ಕಿಯನ್ನು ಪತ್ತೆ ಮಾಡಿದರು. ದಾಂಡೇಲಿ ಸುಭಾಷನಗರದಲ್ಲಿ ಪೆಂಟಿAಗ್ ಕೆಲಸ ಮಾಡುವ ಜೈನುಲ್ಲಾಅಬಿದ್ದಿನ್ ಯಲ್ಲೂರು ಅವರನ್ನು ಪೊಲೀಸರು ವಶಕ್ಕೆಪಡೆದರು. ಕುಳಗಿ ರಸ್ತೆಯ ಶೇರ್ ಎ ಪಂಜಾಬ್ ಹೊಟೇಲ್ ಹತ್ತಿರ ಮಟ್ಕಾ ಆಡಿಸುತ್ತಿದ್ದ ಅವರ ಬಳಿ 375ರೂ ಹಣ ಸಿಕ್ಕಿದ್ದು, ಪಿಎಸ್ಐ ಅಮೀನಸಾಬ್ ಅತ್ತಾರ್ ಅವರು ಈ ಬಗ್ಗೆ ಪ್ರಶ್ನಿಸಿದಾಗ ಪಟೇಲ್ ನಗರದ ನಿಜಾಮುದ್ದಿನ್ ಮಹಮದ್ ನದಾಫ್ ಅವರ ಸೂಚನೆ ಮೇರೆಗೆ ಮಟ್ಕಾ ಆಡಿಸುತ್ತಿರುವುದಾಗಿ ಜೈನುಲ್ಲಾಅಬಿದ್ದಿನ್ ಯಲ್ಲೂರು ಒಪ್ಪಿಕೊಂಡರು.
ಇದರೊoದಿಗೆ ದಾಂಡೇಲಿ ಪಿಎಸ್ಐ ಕಿರಣ ಬಿ ಪಾಟೀಲ್ ಅವರು ನಡೆಸಿದ ಕಾರ್ಯಾಚರಣೆಯಲ್ಲಿ ಮಟ್ಕಾ ಆಡಿಸುತ್ತಿದ್ದ ಸಯ್ಯದ್ಅಲಿ ರಾಹುತ್ ಸಿಕ್ಕಿದ್ದು, ಅವರು ಜನರಿಂದ ಸಂಗ್ರಹಿಸಿದ್ದ 450ರೂ ವಶಕ್ಕೆಪಡೆದರು. ಈ ವೇಳೆ ಸಯ್ಯದ್ಅಲಿ ರಾಹುತ್ ಸಹ ಮಟ್ಕಾ ಬುಕ್ಕಿ ನಿಜಾಮುದ್ದಿನ್ ಮಹಮದ್ ನದಾಫ್ ಅವರ ಹೆಸರು ಬಾಯ್ಬಿಟ್ಟರು. ಗ್ಯಾರೇಜಿನಲ್ಲಿ ಕೆಲಸ ಮಾಡುವ ನಿಜಾಮುದ್ದಿನ್ ಮಹಮದ್ ನದಾಫ್ ಮಟ್ಕಾ ಬುಕ್ಕಿಯಾಗಿ ಅಡ್ಡದಾರಿ ಮೂಲಕ ಕಾಸು ಸಂಪಾದಿಸುತ್ತಿರುವುದನ್ನು ಪೊಲೀಸರು ಬಹಿರಂಗಪಡಿಸಿದರು. ಈ ಎಲ್ಲಾ ಪ್ರಕರಣದಲ್ಲಿಯೂ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿದರು.
