ಕಾoಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಅರಣ್ಯ ಅತಿಕ್ರಮಣ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಯಾವಾಗ? ಎಂದು ಅವರು ಸಹ ಯೋಜಿಸಿದ್ದಾರೆ. ಈ ನಿಟ್ಟಿನಲ್ಲಿ ಸಮಸ್ಯೆ ಕುರಿತು ಅವರು ಸಂಸತ್ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದು, ಕೇಂದ್ರ ಸರ್ಕಾರ ಅದಕ್ಕೆ ಲಿಖಿತ ಉತ್ತರ ಕೊಟ್ಟಿದೆ.
ರಾಹುಲ್ ಗಾಂಧಿ ಅವರು ಫೆ 28ರಂದು ಈ ಬಗ್ಗೆ ಪ್ರಶ್ನಿಸಿದ್ದು, ದೇಶಾದ್ಯಂತ ಅರಣ್ಯ ಹಕ್ಕು ಅರ್ಜಿಯ ಪ್ರಗತಿ ಪಟದ ಮಾಹಿತಿಯನ್ನು ಸರ್ಕಾರ ಒದಗಿಸಿದೆ. ರಾಹುಲ್ ಗಾಂಧಿ ಅವರಿಗೆ ದೊರೆತದ ಪ್ರತಿ ಈ ದಿನ ಸಾಗರದ ಕಾಗೋಡ ತಿಮ್ಮಪ್ಪ ಅವರಿಗೆ ಸಿಕ್ಕಿದೆ. ಅರಣ್ಯ ಭೂಮಿ ಹೋರಾಟಗಾರರ ಹಕ್ಕು ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರನ್ನು ತಮ್ಮ ಮನೆಗೆ ಕರೆಯಿಸಿದ ಕಾಗೋಡು ತಿಮ್ಮಪ್ಪ ಅವರು ಆ ಪ್ರತಿಯನ್ನು ನೋಡಿ ವಿಶ್ಲೇಷಿಸಿದರು.
`ಶಾಸಕ-ಸಂಸದರು ಈ ಬಗ್ಗೆ ಧ್ವನಿ ಎತ್ತಿದರೆ ಮಾತ್ರ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಸಿಗಲು ಸಾಧ್ಯ’ ಎಂದು ಕಾಗೋಡು ತಿಮ್ಮಪ್ಪ ಅವರು ವಿಶ್ಲೇಷಿಸಿದ್ದಾರೆ. `ಜನಪ್ರತಿನಿಧಿಗಳು ಅರಣ್ಯವಾಸಿಗಳ ಭೂಮಿ ಹಕ್ಕಿನ ಬಗ್ಗೆ ಹೋರಾಟ ನಡೆಸದೇ ಇದ್ದಲ್ಲಿ ಸುಪ್ರೀಂ ಕೊರ್ಟನಲ್ಲಿ ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ಆದೇಶವಾಗುವ ಸಾಧ್ಯತೆಯಿದೆ’ ಎಂದು ಕಾಗೋಡು ತಿಮ್ಮಪ್ಪ ಅವರು ಹೇಳಿದ್ದಾರೆ. `ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ 2,53,269 ಅರ್ಜಿ ತಿರಸ್ಕಾರವಾಗಿದೆ’ ಎಂದೂ ಅವರು ಅನಿಸಿಕೆವ್ಯಕ್ತಪಡಿಸಿದ್ದಾರೆ. ಸಂಘಟನೆ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ರಾಜು ನರೇಬೈಲ್, ರಾಘವೇಂದ್ರ ಕವಂಚೂರು ಈ ವೇಳೆ ಇದ್ದರು.
